
ಹೂವಿನಹಡಗಲಿ: ತಮ್ಮ ವರ್ಗಾವಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಸಂತೋಷಕುಮಾರ್ ಅವರು ಪಟ್ಟಣದ ಕಾಯಕನಗರದ ಅಲೆಮಾರಿ ಕುಟುಂಬದ ಮಕ್ಕಳಿಗೆ ಜನನ ಪ್ರಮಾಣಪತ್ರವನ್ನು ಶನಿವಾರ ವಿತರಿಸಿದರು.
ಅಲೆಮಾರಿ ಸಿಂಧೋಳಿ ಜನಾಂಗದ 14 ಮಕ್ಕಳಿಗೆ ಜನನ ಪ್ರಮಾಣ ಪತ್ರ ಸಿಗದ ಕಾರಣ ಶಾಲಾ ಪ್ರವೇಶಾತಿಗೆ ತೊಂದರೆ ಉಂಟಾಗಿತ್ತು. ಸಂತೋಷಕುಮಾರ್ ಅವರು ಇದನ್ನು ಗಮನಿಸಿ, ನ್ಯಾಯಾಲಯದಿಂದ ಆದೇಶ ಪಡೆದು ಗ್ರಾಮ ಆಡಳಿತಾಧಿಕಾರಿ ಮೂಲಕ ಜನನ ನೋಂದಣಿ ಮಾಡಿಸಿದ್ದಾರೆ.
ನ್ಯಾಯಾಲಯ ಹಾಗೂ ತಾಲ್ಲೂಕು ಕಚೇರಿಯಲ್ಲಿ ಶುಲ್ಕ ಪಡೆಯದೆ ಜನನ ಪ್ರಮಾಣ ಪತ್ರ ಮಂಜೂರು ಮಾಡಿಸಿ, ಅಲೆಮಾರಿ ಕುಟುಂಬಗಳಿಗೆ ವಿತರಿಸಿದರು.
ಬೀಳ್ಕೊಡುಗೆ: ವರ್ಗಾವಣೆಗೊಂಡ ತಹಶೀಲ್ದಾರ್ ಜಿ. ಸಂತೋಷಕುಮಾರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಗೌರವಾಧ್ಯಕ್ಷ ಎಂ.ಪಿ.ಎಂ. ಅಶೋಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪರಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಸಿಡಿಪಿಒ ಬಿ. ರಾಮನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.