ADVERTISEMENT

ಅಸ್ತಮಾ ಖಾಯಿಲೆ: ಎದೆ ನೋವು ತಾಳಲಾರದೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:43 IST
Last Updated 4 ಸೆಪ್ಟೆಂಬರ್ 2024, 13:43 IST
<div class="paragraphs"><p>ಪಾತ್ರಿನಿಧಿಕ ಚಿತ್ರ&nbsp;</p></div>

ಪಾತ್ರಿನಿಧಿಕ ಚಿತ್ರ 

   

ಕೂಡ್ಲಿಗಿ: ಅಸ್ತಮಾ ಖಾಯಿಲೆಯಿಂದ ಬರುತ್ತಿದ್ದ ಎದೆ ನೋವು ತಾಳಲಾರದೆ ಬಸವರಾಜ(65) ವಿಷ ಸೇವೆನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಗೆದ್ದಲಗಟ್ಟೆ ಗ್ರಾಮದ ಬಸವರಾಜ, ಅನೇಕ ವರ್ಷಗಳಿಂದ ಆಸ್ತಮ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಎದೆ ನೋವು ಬರುತ್ತಿತ್ತು. ಇದನ್ನು ತಾಳಲಾರದೆ ಸೆ.1ರಂದು ಮನೆಯಲ್ಲಿ ಅವರೇ ಕಾಳು ಗಿಡಕ್ಕೆ ಹೊಡೆಯುವ ಯಾವುದೋ ವಿಷ ಸೇವಿನೆ ಮಾಡಿ ಆಸ್ವಸ್ಥರಾಗಿದ್ದರು. ನಂತರ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಪ್ರಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬೀಮ್ಸ್ ಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.