
ಪ್ರಜಾವಾಣಿ ವಾರ್ತೆ
ಬಳ್ಳಾರಿ: ‘ರಾಜ್ಯ ಸರ್ಕಾರ ಈಚೆಗೆ ನಡೆಸಿದ ಮಾಜಿ ದೇವದಾಸಿಯರ ಸಮೀಕ್ಷೆಗೆ ಎರಡು, ಮೂರನೇ ತಲೆಮಾರು ಪರಿಗಣಿಸಿಲ್ಲ’ ಎಂದ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ’ ಗೌರವಾಧ್ಯಕ್ಷ ಯು.ಬಸವರಾಜ ಆರೋಪಿಸಿದರು.
‘2007-08ರ ಗಣತಿ ಅಸಮರ್ಪಕವಾಗಿತ್ತು. ಹಿಂದಿನ ಗಣತಿಯಲ್ಲಿ ಬಿಟ್ಟುಹೋಗಿದ್ದವರ ಸಮೀಕ್ಷೆ ಜೊತೆಗೆ ಮೂರು ತಲೆಮಾರಿನವರನ್ನು ಪರಿಗಣಿಸಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಈಗ ಕೇವಲ 23,385 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ. 2007-08ರ ಗಣತಿ ಪಟ್ಟಿಯಲ್ಲಿದ್ದ ಅರ್ಧ ಜನರನ್ನು ಮಾತ್ರವೇ ಸಮೀಕ್ಷೆಗೆ ಪರಿಗಣಿಸಲಾಗಿದೆ. ಇದು ದೋಷಪೂರಿತ. ಸಮರ್ಪಕವಾಗಿ ಸಮೀಕ್ಷೆ ನಡೆಸಬೇಕು ಮತ್ತು ಅರ್ಹರಿಗೆ ಸವಲತ್ತುಗಳನ್ನು ತಲುಪಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.