
ಬಳ್ಳಾರಿ: ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕಕ್ಕೆ 21 ಪದಾಧಿಕಾರಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ.
ನೂತನ ಪದಾಧಿಕಾರಿಗಳ ನೇಮಕ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಪ್ರಕಟಣೆ ಹೊರಡಿಸಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರು: ಜಿ.ಟಿ.ಪಂಪಾಪತಿ, ಕೆ.ಬಿ.ವೆಂಕಟೇಶ, ಹಲುಕುಂದಿ ಮಲ್ಲಿಕಾರ್ಜುನಗೌಡ, ಅಳ್ಳಳ್ಳಿ ವೀರೇಶಗೌಡ, ಪುಷ್ಪಾವತಿ, ದೊಡ್ಡ ಹುಲುಗಪ್ಪ, ಉಡೇವ್ ಸುರೇಶ, ಶ್ರೀನಿವಾಸ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು: ಆರ್.ಸೋಮಶೇಖರಗೌಡ, ಅಡವಿಸ್ವಾಮಿ, ಸುನೀಲ್ ರೆಡ್ಡಿ. ಜಿಲ್ಲಾ ಕಾರ್ಯದರ್ಶಿಗಳು: ರಾಮಾಂಜಿನಿ, ರೇಣುಕಾ, ಮಲ್ಲಿಕಾರ್ಜುನ ಗೌಡ, ರಾಘವೇಂದ್ರ ಚಲುವಾದಿ, ನಾನಾ ಸಾಹೇಬ್ ನಿಕ್ಕಂ, ಜ್ಯೋತಿ ಪ್ರಕಾಶ್, ಎಸ್.ಆರ್.ಶರಣ್ ಕುಮಾರ್, ಹುಂಡೇಕರ್ ರಾಜೇಶ್. ಜಿಲ್ಲಾ ಖಜಾಂಚಿ: ಮಾರುತಿ ಪ್ರಸಾದ್. ಕಾರ್ಯಾಲಯ ಕಾರ್ಯದರ್ಶಿ: ಕೆ.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಮೋರ್ಚಾ ಅಧ್ಯಕ್ಷರು: ಮಹಿಳಾ ಮೋರ್ಚಾ: ಹಂಪಿ ರಮಣ, ಎಸ್.ಟಿ. ಮೋರ್ಚಾ: ಧರಪ್ಪ ನಾಯಕ, ಎಸ್.ಸಿ. ಮೋರ್ಚಾ: ಹನುಮಂತಪ್ಪ, ರೈತ ಮೋರ್ಚಾ: ಇಬ್ರಾಹಿಂಪುರ ವೀರನಗೌಡ, ಅಲ್ಪಸಂಖ್ಯಾತ ಮೋರ್ಚಾ: ಅಲ್ಲಾ ಬಕಾಶ್, ಓಬಿಸಿ ಮೋರ್ಚಾ: ತಿರುಮಲ ಅವನ್ನು ನೇಮಕ ಮಾಡಲಾಗಿದೆ.
ಕೋರ್ ಕಮಿಟಿ ಎದುರು ಚರ್ಚಿಸಿಯೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷಕ್ಕೆ ದುಡಿದವರನ್ನೇ ಆಯ್ಕೆ ಮಾಡಲಾಗಿದೆ. ಕೆಲವರಿಗೆ ಅಸಮಾಧಾನವಿರಬಹುದು. ಆದರೆ ನೇಮಕ ನ್ಯಾಯೋಚಿತವಾಗಿ ನಡೆದಿದೆಅನಿಲ್ ಕುಮಾರ್ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಕೆಆರ್‌ಪಿಪಿಯವರಿಗೆ ಮನ್ನಣೆ: ಆರೋಪ
ಹೊಸ ಪದಾಧಿಕಾರಿಗಳ ನೇಮಕದ ಬಗ್ಗೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ಮನೆ ಮಾಡಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಕೆಆರ್‌ಪಿಪಿಯಿಂದ ಬಂದವರಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.