
ಪ್ರಜಾವಾಣಿ ವಾರ್ತೆರೆಡ್ಡಿಗಳ ನಡುವೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಆರುವ ಮುನ್ನವೇ ಶುಕ್ರವಾರ ಮತ್ತೊಂದು ಘಟನೆ ನಡೆದಿದೆ. ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್‌ನಲ್ಲಿ ಬೆಂಕಿ ಅವಘಡವಾಗಿದೆ. ಬಳ್ಳಾರಿಯ ಜಿ ಸ್ಕ್ವೇರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್‌ಗೆ ಶುಕ್ರವಾರ ಸಂಜೆ 6.30ರ ಸುಮಾರಿಗೆ ಬೆಂಕಿ ತಗುಲಿದೆ. ಆದರೆ, ಇದು ಕಾಂಗ್ರೆಸ್‌ನವರ ಕೃತ್ಯ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ.