ಬಳ್ಳಾರಿ: ಬಳ್ಳಾರಿ ನಗರ ಉಪ ವಿಭಾಗದ ಪೊಲೀಸ್ ಠಾಣೆಗಳ ಸರಹದ್ದು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಬಳ್ಳಾರಿ ಗ್ರಾಮೀಣ ಠಾಣೆಯ ಮಹಾನಗರ ಪಾಲಿಕೆ ಮತ್ತು ಹರಿಪ್ರಿಯಾ ನಗರ ಪ್ರದೇಶ, ಮೋಕಾ ರಸ್ತೆ ಮತ್ತು ರಾಘವೇಂದ್ರ ಕಾಲೋನಿಯ ಪ್ರದೇಶಗಳು, ಜನತಾ ನಗರ, ಆಟೋನಗರ ಬೆಲ್ಲದ್ ಶೋರೂಮ್‌ನಿಂದ ಬಿಸಲಹಳ್ಳಿವರೆಗೆ, ಅನಂತಪುರ ರಸ್ತೆಯ ಎಡಭಾಗ ಗಾಂಧಿ ನಗರ ಠಾಣೆಗೆ ಒಳಪಡಲಿವೆ.
ಗಾಂಧಿ ನಗರ ಠಾಣೆಯ ರೈಲ್ವೆ ನಿಲ್ದಾಣ, ಹಳೆ ತಾಲ್ಲೂಕು ಕಚೇರಿ ಆವರಣ, ರಾಜ್‌ಕುಮಾರ್ ಪಾರ್ಕ್, ನಗರ ಪಾಲಿಕೆ, ಹಳೆ ಬಸ್ ನಿಲ್ದಾಣ, ದುರ್ಗಮ್ಮ ದೇವಸ್ಥಾನ, ಬಾಲಾ ಹೋಟೆಲ್, ಕೇಂದ್ರ ಕಾರಾಗೃಹ, ಎಸ್‌ಪಿ ವೃತ್ತದಿಂದ ಮಾರುತಿ ಕಾಲೋನಿ ಪ್ರದೇಶ, ಎಸ್‌ಪಿ ಬಂಗ್ಲೋ ಹಿಂಭಾಗದ ಪ್ರದೇಶ, ನಗರ ಪಾಲಿಕೆ ವ್ಯಾಪ್ತಿಗೆ ಬರುವ ಶಾಸ್ತ್ರಿ ನಗರ ಪ್ರದೇಶಗಳು ಬ್ರೂಸ್‌ಪೇಟೆ ಠಾಣೆಗೆ ಒಳಪಡಲಿವೆ.
ಕೌಲ್ ಬಜಾರ್ ಠಾಣೆಯ ವ್ಯಾಪ್ತಿಯಲ್ಲಿದ್ದ ಅಂಬೇಡ್ಕರ್ ವೃತ್ತದ ಎಡಭಾಗದ ರಿಪಬ್ಲಿಕ್ ವೃತ್ತ–ಕುಟ್ಟಿ ವೃತ್ತ– ಎಸ್‌ಪಿ ವೃತ್ತಕ್ಕೆ ಹೋಗುವ ಪ್ರದೇಶ, ಮೇದರ ಬೀದಿ, ದೇವಿನಗರ, ಶಿವಲಿಂಗನಗರ, ಸಂಜಯ್ ಗಾಂಧಿ ನಗರ, ಬಸವನಕುಂಟೆ, ಮರಾಠ ಬೀದಿ, ಕುಮಾರಸ್ವಾಮಿ ದೇವಸ್ಥಾನ ವೃತ್ತ, ಎಂ.ಕೆ. ನಗರ, ಕೆ.ಎಂ.ಎಫ್ ಪ್ರದೇಶ, ವೀರನಗೌಡ ಕಾಲೋನಿ, ನೇತಾಜಿನಗರ, ಇಂದಿರಾನಗರ, ಕರಿಮರಮ್ಮ ಕಾಲೋನಿ, ಗುರು ಕಾಲೋನಿ, ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಭಾಗ, ಶಾಸ್ತ್ರಿ ನಗರ, ಬ್ಯಾಂಕರ್ಸ್ ಕಾಲೋನಿ, ಕುರಿಹಟ್ಟಿ, ಗಣೇಶ ಕಾಲೋನಿ, ಅಗ್ನಿಶಾಮಕ ಠಾಣೆ ಪ್ರದೇಶಗಳುಗಳೂ ಬ್ರೂಸ್‌ಪೇಟೆ ಠಾಣೆೆಗೆ ಸೇರಲಿದೆ.
ಬಳ್ಳಾರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದ ಸಿರುಗುಪ್ಪ ರಸ್ತೆಯ ವಿಜಯವಾಡ ಶ್ರೀ ಚೈತನ್ಯ ಕಾಲೇಜು ವರೆಗಿನ ಹಾವಂಬಾವಿ ಕಾಲುವೆಯ ಎಡ ಮತ್ತು ಬಲ ಭಾಗಗಳು, ತಾಳೂರು ರಸ್ತೆಯ ಎಡಭಾಗದ ಬಾಲ ಭಾರತಿ ಶಾಲೆಯ ಮುಂಭಾಗದ ವರೆಗಿನ ಪ್ರದೇಶಗಳು ಬ್ರೂಸ್‌ಪೇಟೆ ಠಾಣೆಗೇ ಬರಲಿವೆ.
ಬ್ರೂಸ್‌ಪೇಟೆ ಠಾಣೆಗೆ ಬರುತ್ತಿದ್ದ ಪ್ರದೇಶಗಳಾದ ಹೊಸ ಬಸ್ ನಿಲ್ದಾಣ, ಬುಡಾ ಕಾಂಪ್ಲೆಕ್ಸ್, ರಂಗಮಂದಿರ ಸೇರಿದಂತೆ ಅಂಬೇಡ್ಕರ್ ವೃತ್ತದಿಂದ ಜೈನ್ ಮಾರ್ಕೆಟ್ ರಸ್ತೆ ಮೂಲಕ ಮೋತಿ ವೃತ್ತದವರೆಗೆ, ಕಾರ್ ಸ್ಟ್ರೀಟ್, ಕಣೇಕಲ್ ಬಸ್ ನಿಲ್ದಾಣದವರೆಗಿನ ಬಲಭಾಗದ ಪ್ರದೇಶಗಳು. ಕಣೇಕಲ್ ಬಸ್ ನಿಲ್ದಾಣದಿಂದ ಅನಂತಪುರ ಬೈಪಾಸ್ ರಸ್ತೆ ವೃತ್ತದ ಬಲಭಾಗದಲ್ಲಿರುವ ಎಲ್ಲಾ ಪ್ರದೇಶಗಳು ಗಂಗಪ್ಪ ಮಿಲ್ ವೃತ್ತ-ಬೋಯಗೇರಿ ವೃತ್ತ, ರಾಘವೇಂದ್ರ ಟಾಕೀಸ್ ರಸ್ತೆ-ಇಂದಿರಾ ವೃತ್ತದಿಂದ ಬಿಸಲಹಳ್ಳಿ ವೃತ್ತದವರೆಗೆ, ಜಿಲ್ಲಾಡಳಿತ ಸಂಕೀರ್ಣ ಕಚೇರಿಗಳು ಎಪಿಎಂಸಿ ಪೊಲೀಸ್ ಠಾಣೆಗೆ ಒಳಪಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.