
ಬಳ್ಳಾರಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರು ಪೂರೈಸಬೇಕೆಂಬ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಮುಂದಿನ ಹೋರಾಟದ ಕುರಿತು ಚರ್ಚಿಸಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಸೋಮವಾರ ರೈತರ ಸಭೆ ನಡೆಸಿತು.
ಬಳ್ಳಾರಿ ನಗರದ ಪ್ರವಾಸಿ ಮಂದಿರದ ಬಳಿ ಸಭೆ ಸೇರಿದ ಸಂಘಟನೆಯ ಪದಾಧಿಕಾರಿಗಳು, ವಿವಿಧ ತಾಲೂಕುಗಳ ರೈತರು ಹೋರಾಟದ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಇದೇ 5ರಂದು ಸರ್ಕಾರದ ಮಟ್ಟದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಮಿತಿ ಕೈಗೊಳ್ಳುವ ನಿರ್ಧಾರ ಆಧರಿಸಿ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರ್ ಮಾಧವರೆಡ್ಡಿ, ಲೇಪಾಕ್ಷಿ, ಐನಾತರೆಡ್ಡಿ, ಸೂರಿ ಬಾಬು, ಬಸವರಾಜ ಸ್ವಾಮಿ, ಸುರೇಂದ್ರ, ಈರಣ್ಣ ಮೂಲಿಮನಿ, ಗಣೇಶ್ ಸ್ವಾಮಿ, ಪಂಪನಗೌಡ, ತಿಮ್ಮರೆಡ್ಡಿ, ಉಮಾಪತಿ ಗೌಡ, ಮೇಟಿ ನಾಗರಾಜ್ ಗೌಡ, ಚೆನ್ನಾರೆಡ್ಡಿ, ಬಸರೆಡ್ಡಿ, ರಾಮನಗೌಡ, ಪಂಪಾಪತಿ, ಶ್ರೀಶೈಲ ಆಲದಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.