ಸಿರುಗುಪ್ಪ: ತಾಲ್ಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ನಾಲ್ಕು ಮನೆಗಳು ಭಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.
ಬಾಗೇವಾಡಿ ಗ್ರಾಮದ ಈರಣ್ಣ, ಸಿದ್ದಪ್ಪ, ಹಳೇಕೋಟೆಯ ಶಾರದಾ ಬಸವನಗೌಡ, ಹಂಪಮ್ಮ ಬೊಮ್ಮಣ್ಣ ಅವರ ಮನೆಗಳು ಭಾಗಶಃ ಮನೆಗಳು ಹಾನಿಯಾಗಿವೆ ಎಂದು ತಾಲ್ಲೂಕು ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.
ನಾಗರಹಾಳು, ಅಲಬನೂರು ಗ್ರಾಮಗಳ ಸುತ್ತಮುತ್ತ ಸುರಿದ ಬಾರಿ ಮಳೆಯಿಂದಾಗಿ ತುಂಬಿ ಹರಿದ ಕೋಳ್ಳಿ ಹಳ್ಳದ ನೀರು ಹತ್ತಿ ಬೆಳೆಗಳ ಜಮೀನುಗಳಿಗೆ ನುಗ್ಗಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚರಿಸಿದರು.
ಸಿರುಗುಪ್ಪ -19.4 ಮಿ.ಮೀ, ತೆಕ್ಕಲಕೋಟೆ -15.8 ಮಿ.ಮೀ, ಸಿರಿಗೇರಿ- 5.2 ಮೀ.ಮೀ, ಎಂ.ಸೂಗುರು- 12.2 ಮಿ.ಮೀ, ಹಚ್ಚೋಳ್ಳಿ - 24.8 ಮಿ.ಮೀ, ರಾವಿಹಾಳ್ -21.4 ಮಿ.ಮೀ, ಕರೂರು-13.8 ಮಿ.ಮೀ, ಬೇಳಗಲ್ಲು-15.4 ಮೀ.ಮೀ ಮಳೆಯಾಗಿದೆ.
‘ಪ್ರತಿಬಾರಿ ಮಳೆಯಾದರೆ ಕೋಳ್ಳಿ ಹಳ್ಳವು ತುಂಬಿ ಹರಿಯುತಿದ್ದು, ಸೇತುವೆಯನ್ನು ಎತ್ತರಕ್ಕೆ ನಿರ್ಮಿಸುವಂತೆ ಅನೇಕ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಗಡಿಗ್ರಾಮಗಳು ಆಗಿರುವುದರಿಂದ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಖಾಜಾಹುಸೆನ್ಸಾಬ್ ಡಿ., ಎಚ್. ಹನುಮಂತ, ಗಾಜೀನಾಳು ಹೊನ್ನೂರ್ ಸಾಬ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.