ADVERTISEMENT

ವಿಜಯನಗರ: ಗಮನ ಸೆಳೆದ 75 ಕೆ.ಜಿ ಬಾಳೆ ಗೊನೆ

ಸಿ.ಶಿವಾನಂದ
Published 4 ಅಕ್ಟೋಬರ್ 2021, 3:17 IST
Last Updated 4 ಅಕ್ಟೋಬರ್ 2021, 3:17 IST
ಮಳಿಗೆಯಲ್ಲಿ ಬಾಳೆಗೊನೆ ನೋಡುತ್ತಿರುವ ಸಾರ್ವಜನಿಕರು
ಮಳಿಗೆಯಲ್ಲಿ ಬಾಳೆಗೊನೆ ನೋಡುತ್ತಿರುವ ಸಾರ್ವಜನಿಕರು   

ಹೊಸಪೇಟೆ (ವಿಜಯನಗರ): ಸಂಡೂರು ತಾಲ್ಲೂಕಿನ ಲಕ್ಷ್ಮೀಪುರದ ರೈತ ಕೆ.ಬಸಪ್ಪ ಅವರ ಹೊಲದಲ್ಲಿ ಬೆಳೆದ 75 ಕೆ.ಜಿ. ತೂಕದ ಬಾಳೆ ಗೊನೆ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಮಳಿಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಎರಡು ಎಕರೆಯಲ್ಲಿ ಬೆಳೆದ ಎರಡು ಸಾವಿರ ಬಾಳೆಗೊನೆಗಳೆಲ್ಲ 75 ಕೆ.ಜಿ. ತೂಕ ಹೊಂದಿವೆ. ‘ರೈತ ಕೆ.ಬಸಪ್ಪ ಜಿ-9 ತಳಿಯ ಬಾಳೆ ಬೆಳೆದಿದ್ದು, ಮೊದಲ ಕಟಾವಿನಲ್ಲಿಯೇ ₹15 ಲಕ್ಷ ಲಾಭ ಪಡೆದಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹನುಮೇಶ್‌ ನಾಯ್ಕ ತಿಳಿಸಿದರು.

ಬಾಳೆ ಜತೆಯಲ್ಲಿ ಜಂಬುನಾಥಹಳ್ಳಿಯ ರೈತ ರಾಜಶೇಖರ್ ಬೆಳೆದ ಡ್ರ್ಯಾಗನ್‍ಫ್ರೂಟ್, ಸಂಡೂರಿನ ರೈತ ಚನ್ನಬಸಪ್ಪ ಬೆಳೆದ ಕ್ಯಾರಂಬೋಲಾ, ದೇವಸಮುದ್ರದ ಕಡ್ಡಿ ಸಣ್ಣರಾಮುಡು ಬೆಳೆದ ದೊಣ್ಣ ಮೆಣಸಿನಕಾಯಿ, ಮೆಟ್ರಿಯ ಶ್ರೀಹರಿ ಬೆಳೆದ ಕರಬೂಜ, ಸಂಡೂರಿನ ರೈತ ಬಸಪ್ಪ ಬೆಳೆದ ಅಡಿಕೆ, ಸೀತಾಫಲ, ಮೋಸಂಬಿ ಗಮನ ಸೆಳೆಯುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.