ADVERTISEMENT

ವಿಜೃಂಭಣೆಯ ಬನಶಂಕರಿ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 3:03 IST
Last Updated 10 ಫೆಬ್ರುವರಿ 2026, 3:03 IST
ಕುರುಗೋಡು ತಾಲ್ಲೂಕಿನ ಎಚ್. ವೀರಾಪುರ ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ಸೋಮವಾರ ಜರುಗಿತು
ಕುರುಗೋಡು ತಾಲ್ಲೂಕಿನ ಎಚ್. ವೀರಾಪುರ ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ಸೋಮವಾರ ಜರುಗಿತು   

ಪ್ರಜಾವಾಣಿ ವಾರ್ತೆ

ಕುರುಗೋಡು: ತಾಲ್ಲೂಕಿನ ಎಚ್. ವೀರಾಪುರ ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ಸೋಮವಾರ ಸಡಗರದಿಂದ ಜರುಗಿತು.

ರಥೋತ್ಸವದ ಅಂಗವಾಗಿ ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಾತನವರ ದರ್ಶನ ಪಡೆದು ಹೂ–ಹಣ್ಣು ಮತ್ತು ಕಾಯಿ ಸಮರ್ಪಿಸಿದರು.

ADVERTISEMENT

ಸಂಜೆ ಅಲಂಕೃತ ರಥವನ್ನು ದೇವಸ್ಥಾನದ ಆವರಣದಿಂದ ಎದುರು ಬಸವಣ್ಣ ಕಟ್ಟೆಯವರೆಗೆ ಎಳೆದು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರು ಬನಶಂಕರಿದೇವಿಗೆ ಜಯಕಾರ ಕೂಗಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ರಥಕ್ಕೆ ಹೂ ಹಣ್ಣು ಎಸೆದು ಹರಕೆ ತೀರಿಸಿದರು.

ಹೆಚ್ಚಿನ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸ್‍ಐ ಸುಪ್ರಿತ್ ಮತ್ತು ಸಿಬ್ಬಂದಿ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಂದೋಬಸ್ತ್ ಮಾಡಲಾಗಿತ್ತು.

ಧರ್ಮಸಭೆ: ರಥೋತ್ಸವದ ಅಂಗವಾಗಿ ಮಠದಲ್ಲಿ ಬೆಳಿಗ್ಗೆ 1111 ಮಹಿಳೆಯರಿಗೆ ಉಡಿತುಂಬಲಾಯಿತು.

ನಂತರ ಮಾತನಾಡಿದ ಮಠದ ಪೀಠಾಧಿಪತಿ ಜಡೇಶ ತಾತ, ಆಧ್ಯಾತ್ಮಿಕ ಚಿಂತನೆಗಳು ನೆಮ್ಮದಿಯ ಜೀವನಕ್ಕೆ ಸೋಪಾನವಾಗಲಿದೆ ಎಂದರು.

ಆಧ್ಯಾತ್ಮಿಕ ಬದುಕಿನಲ್ಲಿದ್ದು, ಲೌಕಿಕ ಬದುಕನ್ನು ಜಯಿಸಬೇಕು ಎಂದರು. ಎಮ್ಮಿಗನೂರು ಹಂಪಿ ಸಾವಿರ ದೇವರು ಗುರುಮಹಾಂತಿನ ಮಠದ ವಾಮದೇವ ಶಿವಾಚಾರ್ಯ ಶ್ರೀ, ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಮಠದ ಸಿದ್ದಲಿಂಗ ಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.