ADVERTISEMENT

ಬಳ್ಳಾರಿ: ಡಿಎಸ್‌ಪಿ ಸೇರಿ ಹಲವರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:52 IST
Last Updated 13 ಫೆಬ್ರುವರಿ 2026, 6:52 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಬಳ್ಳಾರಿ: ನಗರ ಉಪ ವಿಭಾಗದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ನಂದಾರೆಡ್ಡಿ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಬುಧವಾರ ಆದೇಶಿಸಿದೆ. 

‌ಬಳ್ಳಾರಿ ನಗರ ಡಿಎಸ್‌ಪಿಯಾಗಿದ್ದ ಚಂದ್ರಕಾಂತ ನಂದಾರೆಡ್ಡಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ನಿಯೋಜಿಸಲಾಗಿದೆ. ಆದರೆ, ನಿರ್ದಿಷ್ಟ ಜಾಗ ತೋರಿಸಿಲ್ಲ. ಅವರ ವರ್ಗಾವಣೆಯಿಂದ ತೆರವಾಗಿದ್ದ ನಗರ ಡಿಎಸ್‌ಪಿ ಸ್ಥಾನಕ್ಕೆ ಬೆಂಗಳೂರು ನಗರ ಸಿಸಿಬಿ ಡಿಎಸ್‌ಪಿಯಾಗಿದ್ದ ಗೋವಿಂದರಾಜು ವಿ. ಅವರನ್ನು ನಿಯೋಜಿಸಲಾಗಿದೆ. 

ADVERTISEMENT

ಕುರುಗೋಡು ವೃತ್ತದ ಇನ್‌ಸ್ಪೆಕ್ಟರ್‌ ವಿಶ್ವನಾಥ ಹಿರೇಗೌಡ‌ರ್ ಅವರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ವೃತ್ತಕ್ಕೆ ವರ್ಗಾಯಿಸಲಾಗಿದ್ದು, ಕುರುಗೋಡಿಗೆ ಬಾಳನಗೌಡ ಎಸ್. ಮಾನಶೆಟ್ಟರ್ ಅವರನ್ನು ನಿಯೋಜಿಸಲಾಗಿದೆ. 

ಬಳ್ಳಾರಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಅಯ್ಯನಗೌಡ ವಿ. ಪಾಟೀಲ ಅವರನ್ನು ವಿಜಯನಗರದ ಡಿ.ಎಸ್.ಬಿಗೆ ಕಳುಹಿಸಲಾಗಿದೆ. ಪಿ.ಡಿ ಹಳ್ಳಿ ಠಾಣೆಯಲ್ಲಿದ್ದ ರುದ್ರಪ್ಪ ಎಲ್. ಅವರನ್ನು ಸಂಚಾರ ಠಾಣೆಗೆ ನಿಯೋಜನೆ ಮಾಡಲಾಗಿದೆ.  

ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್‌ ಸುಭಾಷ್‌ ಚಂದ್ರ ಅವರನ್ನು ಪಿ.ಡಿ ಹಳ್ಳಿ ಠಾಣೆಗೆ ನಿಯೋಜಿಸಲಾಗಿದೆ. 

ಸಿಇಎನ್‌ ಠಾಣೆಯಲ್ಲಿದ್ದ ಇನ್‌ಸ್ಪೆಕ್ಟರ್‌ ರಮಾಕಾಂತ್ ಯಲ್ಲಪ್ಪ ಹುಲ್ಲೂ‌ರ್‌ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.