ADVERTISEMENT

ಬಳ್ಳಾರಿ | ಬಾಲಕಿಯರ ಬಾಲ ಮಂದಿರದಿಂದ ಮೂವರು ಪರಾರಿ: ಒಬ್ಬಾಕೆ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:42 IST
Last Updated 14 ಅಕ್ಟೋಬರ್ 2025, 4:42 IST
   

ಬಳ್ಳಾರಿ: ಬಳ್ಳಾರಿಯ ಸರ್ಕಾರಿ ಬಾಲಕಿಯರ ಬಾಲಮಂದಿರದ ಸ್ವೀಕಾರ ಕೇಂದ್ರದಿಂದ ಮೂವರು ಬಾಲಕಿಯರು ಇತ್ತೀಚೆಗೆ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಒಬ್ಬ ಬಾಲಕಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಅ.2ರ ನಸುಕಿನಲ್ಲಿ ಮೂವರು ಬಾಲಕಿಯರು ಪರಾರಿಯಾಗಿದ್ದರು.  ಮೂವರು ಬಾಲಕಿಯರು ವಿಜಯನಗರದಿಂದ ಬಳ್ಳಾರಿಯ ಬಾಲಕಿಯರ ಮಂದಿರಕ್ಕೆ ಬಂದವರಾಗಿದ್ದು, ಇದರಲ್ಲಿ ಇಬ್ಬರು ಪೋಕ್ಸೊ ಪ್ರಕರಣದ ಸಂತ್ರಸ್ತರು ಎನ್ನಲಾಗಿದೆ. 

ಮೂವರು 15–17 ವರ್ಷ ವಯಸ್ಸಿನವರು ಎಂದು ಹೇಳಲಾಗಿದೆ. ಮೇ 2ರಂದೇ ಘಟನೆ ನಡೆದಿದ್ದರೂ, ವಾರದ ಬಳಿಕ ಒಬ್ಬ ಬಾಲಕಿಯನ್ನು ಮಾತ್ರ ಪತ್ತೆ ಮಾಡಲಾಗಿದೆ. ಇನ್ನಿಬ್ಬರು ಬಾಲಕಿಯರ ಸುಳಿವು ಈ ವರೆಗೆ ಪತ್ತೆಯಾಗಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.