ಗುಮ್ಮಡಿ ಗೋಪಾಲಕೃಷ್ಣ, ಡಿಂಗ್ರಿ ನಾಗರಾಜ್
ಬಳ್ಳಾರಿ: ರಂಗಭೂಮಿ ಕಲಾವಿದ ಬಳ್ಳಾರಿ ರಾಘವ ಹೆಸರಿನಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ನೀಡುವ ರಾಜ್ಯಮಟ್ಟದ ‘ಬಳ್ಳಾರಿ ರಾಘವ’ ಪ್ರಶಸ್ತಿಗೆ ರಂಗಕರ್ಮಿ ಮತ್ತು ನಟ ಡಿಂಗ್ರಿ ನಾಗರಾಜ್ ಮತ್ತು ಆಂಧ್ರಪ್ರದೇಶದ ಮೇಡೂರು ಗ್ರಾಮದ ರಂಗಕರ್ಮಿ ಗುಮ್ಮಡಿ ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹21,100 ನಗದು ಮತ್ತು ಬೆಳ್ಳಿ ಫಲಕ ಹೊಂದಿದೆ.
ಬಳ್ಳಾರಿ ರಾಘವರ ಜಯಂತಿ ಪ್ರಯುಕ್ತ ಆಗಸ್ಟ್ 2 ಮತ್ತು 3ರಂದು ಬಳ್ಳಾರಿಯಲ್ಲಿ ನಡೆಯುವ ಸಮಾರಂಭ ಹಾಗೂ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.