
ಪ್ರಜಾವಾಣಿ ವಾರ್ತೆ
ಬಳ್ಳಾರಿ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಬಳ್ಳಾರಿ ನಗರದ ವ್ಯಕ್ತಿಯೊಬ್ಬರಿಗೆ ₹90.50 ಲಕ್ಷ ಹಣ ವಂಚಿಸಲಾಗಿದೆ.
ಈ ಸಂಬಂಧ ಬಳ್ಳಾರಿಯ ‘ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ (ಸಿಇಎನ್)’ ಠಾಣೆಯಲ್ಲಿ ಜ. 23ರಂದು ಎಫ್‌ಐಆರ್ ದಾಖಲಾಗಿದೆ. ದೂರುದಾರ ವ್ಯಕ್ತಿಯನ್ನು 2025ರ ಅ.13ರಂದು ವಾಟ್ಸ್‌ಆ್ಯಪ್ ಗ್ರೂಪ್‌ವೊಂದಕ್ಕೆ ಸೇರಿಸಲಾಗಿತ್ತು ಎನ್ನಲಾಗಿದೆ. ಅದರಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ತಾವು ಹೇಳುವ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ನಿತ್ಯ ಶೇ 10ರಷ್ಟು ಲಾಭಾಂಶ ನೀಡುವುದಾಗಿ ಅವರಿಗೆ ತಿಳಿಸಲಾಗಿದೆ.
ಇದನ್ನು ನಂಬಿದ ವ್ಯಕ್ತಿ ಹಂತ ಹಂತವಾಗಿ ₹90.50 ಲಕ್ಷ ಹಾಕಿ ಮೋಸ ಹೋಗಿದ್ದಾರೆ. ಲಾಭಾಂಶ ಸಿಗದೇ, ಹಾಕಿದ ಬಂಡವಾಡವೂ ಬಾರದೆ ವ್ಯಕ್ತಿ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.