ಪ್ರಾತಿನಿಧಿಕ ಚಿತ್ರ
ಬಳ್ಳಾರಿ: ಬಳ್ಳಾರಿ ನಗರದ ಹುಸೇನ್ ನಗರದ ಮಹಿಳೆಯೊಬ್ಬರು ಪರಪುರುಷನೊಬ್ಬನಿಂದ ತನಾಗದ ಅನ್ಯಾಯವನ್ನು ವಿಡಿಯೊದಲ್ಲಿ ಹೇಳಿಕೊಳ್ಳುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುನ್ನಿ (23) ಮೃತರು. ವಿಚ್ಛೇದಿತೆ ಮುನ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಸಂಬಂಧಿ ಮೊಹಮ್ಮದ್ ಶೇಖ್ ಎಂಬಾತನೊಂದಿಗೆ ಸಲುಗೆ ಹೊಂದಿದ್ದರು. ಇತ್ತೀಚೆಗೆ ಮೊಹಮ್ಮದ್ ಶೇಖ್ ಹಾಗೂ ಮುನ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮುನ್ನಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುನ್ನಿ ಸಾವಿಗೆ ಮೊಹಮ್ಮದ್ ಶೇಖನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ, ಪ್ರಕರಣದ ಸ್ಥಿತಿಗತಿ ಮಾಹಿತಿಪಡೆದರು.
ಏನಿದೆ ವಿಡಿಯೊದಲ್ಲಿ: ಎಲ್ಲಾ ಅವನಿಂದಲೇ ಆಗುತ್ತಿರುವುದು. ಅವನು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಸತ್ತರೆ ಆತ ಖುಷಿಯಾಗಿರುತ್ತಾನೆ. ಅವನನ್ನು, ಆವನ ಹೆಂಡತಿ, ತಾಯಿಯನ್ನು ಬಿಡಬಾರದು. ಮೂರು ಜನ ಸೇರಿ ನನಗೆ ಕಿರುಕುಳ ನೀಡಿದ್ದಾರೆ. ಮನೆಗೆ ಬಂದು ಹೊಡೆದಿದ್ದಾರೆ ಎಂದು ಮುನ್ನಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.