ADVERTISEMENT

ತೆಕ್ಕಲಕೋಟೆ | ರಕ್ತದಾನ ಶಿಬಿರ: 60 ಯೂನಿಟ್ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:52 IST
Last Updated 17 ಜನವರಿ 2026, 5:52 IST
ತೆಕ್ಕಲಕೋಟೆ ಪಟ್ಟಣದ ಹಜರತ್ ಸೈಯದ್ ‘ಆದೋನಿ’ ಸಾಹೇಬ್ ದರ್ಗಾ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು
ತೆಕ್ಕಲಕೋಟೆ ಪಟ್ಟಣದ ಹಜರತ್ ಸೈಯದ್ ‘ಆದೋನಿ’ ಸಾಹೇಬ್ ದರ್ಗಾ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು   

ತೆಕ್ಕಲಕೋಟೆ: ಪಟ್ಟಣದ ನಿಟ್ಟೂರು ರಸ್ತೆ ಹೊರವಲಯದ ಹಜರತ್‌‌ ಖ್ವಾಜಾ ಸೈಯದ್ ಷಾ ಅಬ್ದುಲ್ ರಜಾಕ್ ಪೀರ್ ಹಸೇನಿ ವುಲ್ ಹುಸೇನಿ ಜಾಫ್ರಿ ಚಿಸ್ತಿ ವುಲ್ ಖಾದ್ರಿ ಶರಣರ ದರ್ಗಾ ಅವರಣದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ (ರಕ್ತ ಸುರಕ್ಷತ), ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

60 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಸಿರುಗುಪ್ಪ ಸ್ಪಂದನ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಲೋಕೇಶ್, ಸಿಬಂದಿಗಳಾದ ಮಹೇಶ್, ವೆಂಕೋಬ, ಮಣಿ, ಮಂಜುನಾಥ, ಶಿವು, ಇಂದಿರಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT