ಕಂಪ್ಲಿ: ‘ಅಹಿಂಸೆಯ ಪ್ರತಿಪಾದಕ ಬುದ್ಧನ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಸಾಕಾರಗೊಳಿಸಬೇಕಿದೆ’ ಎಂದು ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ ತಿಳಿಸಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬುದ್ಧ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಶಾಂತಿ, ಕರುಣೆ, ಪ್ರೀತಿಯನ್ನು ಜಗತ್ತಿಗೆ ಸಾರುತ್ತಿರುವ ಏಕೈಕ ಧರ್ಮ ಬೌದ್ಧ ಧರ್ಮ ಎಂದರು.
‘ಕಳೆದು ಹೋದ ಬುದ್ಧನನ್ನು ಅಂಬೇಡ್ಕರ್ ಪುನಃ ಭಾರತದಲ್ಲಿ ಬೆಳಗಿಸಿದರು. ಜಗತ್ತಿನ 28 ದೇಶಗಳು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಾಗಲು ಸಾಧ್ಯವಾಗಿವೆ’ ಎಂದು ತಿಳಿಸಿದರು.
‘ಬುದ್ಧನನ್ನು ಭಾರತದಲ್ಲಿ ತಪ್ಪಾಗಿ ಬಿಂಬಿಸಿ ಅವರ ತತ್ವಗಳನ್ನು ತಿರುಚುವ ಷಡ್ಯಂತ್ರ್ಯಗಳು ನಡೆಯುತ್ತಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಚೈತನ್ಯಾ ಎಸ್.ಎಸ್.ಳನ್ನು ಗೌರವಿಸಲಾಯಿತು. ನೂತನ ತಹಶೀಲ್ದಾರ್ ಜೂಗಲ ಮಂಜುನಾಯಕ, ವರ್ಗಾವಣೆಗೊಂಡ ತಹಶೀಲ್ದಾರ್ ಎಸ್. ಶಿವರಾಜ, ಪರಿಶಿಷ್ಟ ಜಾತಿ ಮುಖಂಡ ಕೆ. ಲಕ್ಷ್ಮಣ ಮಾತನಾಡಿದರು.
ಬೌದ್ಧ ಸಮಾಜದ ಪದಾಧಿಕಾರಿಗಳಾದ ಚನ್ನಬಸಪ್ಪ, ಪಿ.ಸಿ. ಅಂಜಿನಪ್ಪ, ಡಿ. ಮುನಿಸ್ವಾಮಿ, ಟಿ. ಶಿವಪ್ಪ, ಸಿ. ರುದ್ರಪ್ಪ, ಸಿ. ವೆಂಕಟೇಶ, ಕೆ. ಲಕ್ಷ್ಮಣ, ರವಿ ಮಣ್ಣೂರು, ಪಾಮಯ್ಯ ಶರಣರು, ಉಮೇಶ್, ಟಿ.ಎಚ್.ಎಂ. ರಾಜಕುಮಾರ್, ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.