ADVERTISEMENT

ಬಳ್ಳಾರಿ: ಜೈವಿಕ ಉದ್ಯಾನಕ್ಕೆ ಬಸ್‌ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:17 IST
Last Updated 13 ಜನವರಿ 2021, 16:17 IST
ಬಸ್‌ ಸಂಚಾರಕ್ಕೆ ಬುಧವಾರ ಹೊಸಪೇಟೆ ನಿಲ್ದಾಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಹಸಿರು ನಿಶಾನೆ ತೋರಿದರು
ಬಸ್‌ ಸಂಚಾರಕ್ಕೆ ಬುಧವಾರ ಹೊಸಪೇಟೆ ನಿಲ್ದಾಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಹಸಿರು ನಿಶಾನೆ ತೋರಿದರು   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಿಂದ ಬುಧವಾರ ಬಸ್‌ ಸಂಚಾರ ಪುನರಾರಂಭಗೊಂಡಿದೆ.

ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ, ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌ ಅವರು ಇಲ್ಲಿನ ನಿಲ್ದಾಣದಲ್ಲಿ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ನೀಡಿದರು.

ಉದ್ಯಾನಕ್ಕೆ ಮಂಗಳವಾರ ರಜೆ ಇರುವುದರಿಂದ ಆ ದಿನ ಹೊರತುಪಡಿಸಿ ಉಳಿದ ದಿನ ಬಸ್‌ ಸಂಚರಿಸಲಿದೆ. ಕೇಂದ್ರ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 9.15, 10.45, ಮಧ್ಯಾಹ್ನ 12.30, 2.30 ಹಾಗೂ ಸಂಜೆ 4.15ಕ್ಕೆ ಹೊರಡಲಿದೆ. ಕಮಲಾಪುರ ಮಾರ್ಗವಾಗಿ ಬಸ್‌ ಸಂಚರಿಸಲಿದೆ.

ADVERTISEMENT

ಉದ್ಯಾನದಿಂದ ಬೆಳಿಗ್ಗೆ 10, 11.30, ಮಧ್ಯಾಹ್ನ 1.15, 3.15 ಹಾಗೂ ಸಂಜೆ 5ಕ್ಕೆ ನಿರ್ಗಮಿಸುವ ಬಸ್‌, ಪಾಪಿನಾಯಕನಹಳ್ಳಿ, ಕಾರಿಗನೂರು, ಬಳ್ಳಾರಿ ವೃತ್ತದ ಮೂಲಕ ಕೇಂದ್ರ ಬಸ್‌ ನಿಲ್ದಾಣ ಬಂದು ಸೇರಲಿದೆ. ಸಾರ್ವಜನಿಕರು ಬಸ್‌ಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶೀನಯ್ಯ ತಿಳಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.