ತೆಕ್ಕಲಕೋಟೆ: ಕಂಪ್ಲಿ– ಎಂ. ಸೂಗೂರು ಮಾರ್ಗವಾಗಿ ಸಿರುಗುಪ್ಪ ತೆರಳಲು ಬಸ್ ಕೊರತೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ಕಡಿಮೆ ಬಸ್ ಬಿಟ್ಟಿರುವುರಿಂದ ಮಣ್ಣೂರು, ಸೂಗೂರು, ರುದ್ರಪಾದ, ನಡವಿ, ಉಡೇಗೋಳ ನಿಟ್ಟೂರು, ಹೆರಕಲ್, ಕೆಂಚನಗುಡ್ಡ, ದೇವಲಾಪುರ ಮಾರ್ಗದಲ್ಲಿ ಸಂಚರಿಸುವ ಕಂಪ್ಲಿ ಹಾಗೂ ಬೆಂಗಳೂರು (ಸೂಗೂರು ವಾಸ್ತವ್ಯ) ಬಸ್‌ಗಳು ಪ್ರಯಾಣಿಕರಿಂದ ಸದಾ ತುಂಬಿರುತ್ತವೆ. ವಿದ್ಯಾರ್ಥಿಗಳ ಶಾಲಾ, ಕಾಲೇಜಿಗಳಿಗೆ ತೆರಳಲು ಬಸ್‌ನಲ್ಲಿ ಕುಳಿತುಕೊಳ್ಳಲು ಜಾಗ ಸಿಗದೆ ಬಾಗಿಲಿನಲ್ಲೇ ಜೋತುಬಿದ್ದು ಸಾಗುವಂತಾಗಿದೆ.
‘ಸಂಜೆ 5 ಗಂಟೆ ನಂತರ ಸಿರುಗುಪ್ಪದಿಂದ ಹೊರಡುವ ಬಸ್ ಹಳ್ಳಿಗಳಿಗೆ ಬರುವುದರೊಳಗೆ ಸಂಜೆ 7ರಿಂದ 8 ಆಗುತ್ತದೆ. ಬಸ್ ಸಮಸ್ಯೆ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ, ಬೇಡವೋ ಎಂದು ಚಿಂತಿಸುವಂತಾಗಿದೆ’ ಎಂದು ವಿದ್ಯಾರ್ಥಿ ಪಾಲಕರು ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಸಿರುಗುಪ್ಪ ಡಿಪೋ ಪ್ರಭಾರ ವ್ಯವಸ್ಥಾಪಕ ಉಮಾ ಮಹೇಶ್ವರ ಮಾತನಾಡಿ, ‘ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಮನವಿ ಸಲ್ಲಿಸಿದರೆ ಹೆಚ್ಚುವರಿ ಬಸ್ ಬಿಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.