ಸಾವು
ಪ್ರಾತಿನಿಧಿಕ ಚಿತ್ರ
ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಕಾರುವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಗುಚಿದ ಪರಿಣಾಮ ಚಾಲಕ ಸೇರಿದಂತೆ ಮೂರು ಜನ ಗಾಯಗೊಂಡಿದ್ದು, ಕಾರಿನ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದ ನಿವಾಸಿ ತಿಪ್ಪೇಸ್ವಾಮಿ(37) ಮೃತ ವ್ಯಕ್ತಿ. ಬೆಳಗಿನ ಜಾವ ಕಾರಿನಲ್ಲಿ ಕುಡತಿನಿ ಪಟ್ಟಣದಿಂದ ವಡ್ಡು ಗ್ರಾಮದ ಬಳಿ ಎಚ್‍ಎಸ್‍ಟಿ ಕಾಲೊನಿಗೆ ತಿಪ್ಪೇಸ್ವಾಮಿ ಅವರು ತೆರಳುವಾಗ ಈ ಘಟನೆ ಸಂಭವಿಸಿದೆ.
ಕಾರಿನ ಚಾಲಕ ಗೌತಮನು ಅಜಾಗುರುಕತೆ, ಅತಿವೇಗವಾಗಿ ಚಾಲನೆ ಮಾಡಿದ್ದರಿಂದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಜಿಂದಾಲ್ ಕಾರ್ಖಾನೆಯ ಸಂಜಿವಿನಿ ಆಸ್ಪತ್ರೆಗೆ ಸಾಗಿಸಿದ್ದಾರೆ ಅಲ್ಲಿನ ವೈದ್ಯರು ವ್ಯಕ್ತಿಯು ಮೃತಪಟ್ಟಿದ್ದಾನೆ ತಿಳಿಸಿದ್ದಾರೆ.
ಮೃತನ ಸ್ನೇಹಿತ ಪ್ರವೀಣಕುಮಾರ್ ನೀಡಿದ ದೂರು ಆಧರಿಸಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.