ADVERTISEMENT

ಸತತ ಮಳೆ ‌| ಕುಸಿದು ಬಿದ್ದ ಹಂಪಿ ಮಂಟಪ

ಭಾಗಶಃ ಕುಸಿದ ಮನೆಯ ಗೋಡೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:20 IST
Last Updated 13 ಅಕ್ಟೋಬರ್ 2019, 15:20 IST
ಹಂಪಿ ರಥಬೀದಿ ಬದಿಯ ಮಂಟಪದ ಕಲ್ಲುಗಳು ಬಿದ್ದಿರುವುದುಚಿತ್ರ: ಆರ್‌.ಎಸ್‌. ಸ್ಥಾವರಿಮಠ
ಹಂಪಿ ರಥಬೀದಿ ಬದಿಯ ಮಂಟಪದ ಕಲ್ಲುಗಳು ಬಿದ್ದಿರುವುದುಚಿತ್ರ: ಆರ್‌.ಎಸ್‌. ಸ್ಥಾವರಿಮಠ   

ಹೊಸಪೇಟೆ: ತಾಲ್ಲೂಕಿನ ಹಂಪಿ ರಥಬೀದಿಯ ಮಗ್ಗುಲಲ್ಲಿರುವ ಸಾಲು ಮಂಟಪದ ಒಂದು ಭಾಗ ಭಾನುವಾರ ಭಾಗಶಃ ಕುಸಿದು ಬಿದ್ದಿದೆ.

ಎರಡು ವಾರಗಳಿಂದ ಸತತವಾಗಿ ಹಂಪಿ ಸುತ್ತಮುತ್ತ ಮಳೆ ಸುರಿಯುತ್ತಿದ್ದು, ಮಂಟಪ ಶಿಥಿಲಗೊಂಡು ಅದರ ಒಟ್ಟು ಹದಿನೆಂಟು ಕಲ್ಲುಗಳು ಉರುಳಿ ಬಿದ್ದಿವೆ. ವಿಷಯ ತಿಳಿದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರು ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

’ಪುರಾತನ ಮಂಟಪಗಳು ಮಳೆಗೆ ಶಿಥಿಲಗೊಂಡಿದ್ದು, ಭಾನುವಾರ ಹದಿನೆಂಟು ಕಂಬಗಳು ಉರುಳಿ ಬಿದ್ದಿವೆ. ಈ ಭಾಗದಲ್ಲಿ ಈಗಾಗಲೇ ಮಂಟಪಗಳ ಜೀರ್ಣೊದ್ಧಾರ ಕೆಲಸ ಪ್ರಗತಿಯಲ್ಲಿದ್ದು, ಬರುವ ದಿನಗಳಲ್ಲಿ ಇದನ್ನು ಕೂಡ ಜೀರ್ಣೋದ್ಧಾರಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಗರ ಹೊರವಲಯದ ಅನಂತಶಯನಗುಡಿ ಸಮೀಪ ಬಿಂಗಿ ನಾಗೇಂದ್ರಪ್ಪ ಎಂಬುವರ ಮನೆ ಭಾಗಶಃ ಕುಸಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.