
ಪ್ರಜಾವಾಣಿ ವಾರ್ತೆ
ಬಳ್ಳಾರಿ: ನಗರದ ಅನಂತಪುರ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿರುವ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರ ತೋಟದ ಮನೆಯ ಆವರಣದಲ್ಲಿ ₹58,600 ಮೌಲ್ಯದ ವಸ್ತುಗಳು ಕಳವಾಗಿವೆ.
ಈ ಕುರಿತು ಬುಧವಾರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜ.18 ರಂದು ರಾತ್ರಿ 10ಗಂಟೆಯಿಂದ 19ರ ಬೆಳಗ್ಗೆ 8.30 ನಡುವಿನ ಅವಧಿಯಲ್ಲಿ ಸಿನಿಮಾ ಪ್ರೊಜೆಕ್ಟರ್, ಎರಡು ಸ್ಪೀಕರ್, 250 ಕೆ.ಜಿ ತೂಕದ ಎರಡು ಕಬ್ಬಿಣದ ಗೇಟ್‌ಗಳು ಹಾಗೂ ಮೂರು ಕಿಟಕಿಗಳು, 50 ಕೆ.ಜಿ ತೂಕದ ಎರಡು ಕಬ್ಬಿಣದ ಬಾಕ್ಸ್‌ಗಳು ಸೇರಿದಂತೆ 15 ಮೀಟರ್ ಉದ್ದದ ಕೇಬಲ್ ಕಳವು ಮಾಡಲಾಗಿದೆ ಎಂದು ತೋಟದ ಮನೆ ಉಸ್ತುವಾರಿ ವಿ.ಹನುಮಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.