ADVERTISEMENT

‘ವಿಶೇಷ ರೈಲು ಓಡಿಸಲು ಸಮ್ಮತಿ’

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 12:42 IST
Last Updated 6 ಆಗಸ್ಟ್ 2019, 12:42 IST
ಬಾಬುಲಾಲ್‌ ಜಿ. ಜೈನ್‌
ಬಾಬುಲಾಲ್‌ ಜಿ. ಜೈನ್‌   

ಹೊಸಪೇಟೆ: ‘ಗದಗ–ಕೊಪ್ಪಳ–ಹೊಸಪೇಟೆ ಮಾರ್ಗವಾಗಿ ಹುಬ್ಬಳ್ಳಿ–ಚೆನ್ನೈ (ಗಾಡಿ ಸಂಖ್ಯೆ 07324/07323) ವಿಶೇಷ ರೈಲು ಓಡಿಸುವುದಾಗಿ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಭರವಸೆ ನೀಡಿದ್ದಾರೆ’ ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ಬಾಬುಲಾಲ್‌ ಜಿ. ಜೈನ್‌ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘2015ರಿಂದ ಸತತ ಎರಡು ವರ್ಷ ಈ ರೈಲು ಮೇಲ್ಕಂಡ ಮಾರ್ಗಗಳ ಮೂಲಕ ಸಂಚರಿಸಿತ್ತು. ಬಳಿಕ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳು, ಸಚಿವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಪೀಯೂಷ್‌ ಗೋಯೆಲ್‌, ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಿಯಮಿತವಾಗಿ ರೈಲು ಓಡಿಸುವ ಭರವಸೆ ಕೊಟ್ಟಿದ್ದಾರೆ. ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಎಲ್ಲ ಸಚಿವರಿಗೂ ಕೃತಜ್ಞತೆ ತಿಳಿಸುತ್ತೇನೆ’ ಎಂದು ಹೇಳಿದ್ದಾರೆ.

‘ಈ ರೈಲು ಓಡಾಟದಿಂದ ಕೇರಳ, ತಮಿಳುನಾಡು ಸೇರಿದಂತೆ ಇತರೆ ಭಾಗಗಳಿಗೆ ಹೋಗುವವರಿಗೆ ಅನುಕೂಲವಾಗುತ್ತದೆ. ರೈಲು ಸ್ಥಗಿತಗೊಂಡಿದ್ದರಿಂದ ಜನ ಎರಡ್ಮೂರು ರೈಲು ಬದಲಿ ಮಾಡಿಕೊಂಡು ಹೋಗುತ್ತಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.