ADVERTISEMENT

ವಿನೂತನ ಜಾಗೃತಿ: ‘ನನಗೆ ನಾನು ನಾಚಿಕೆಪಡುತ್ತೇನೆ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 7:24 IST
Last Updated 30 ಮಾರ್ಚ್ 2020, 7:24 IST
   

ಹೊಸಪೇಟೆ: ಕೊರೊನಾ ಸೋಂಕು ಹರಡದಂತೆ ಲಾಕ್‌ಡೌನ್‌ ಘೋಷಿಸಿದರೂ ಅದನ್ನು ಲೆಕ್ಕಿಸದೆ ಹೊರಬರುತ್ತಿರುವ ಜನರಿಗೆ ‘ದುರ್ಗಾ ಟೀಂ’ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.

ಹೊರಗೆ ಬಂದವರನ್ನು ತಡೆದು ಅವರಿಗೆ, ‘ನಾನು ನನಗೆ ನಾಚಿಕೆಪಡುತ್ತೇನೆ. ನಾನು ನಿಮ್ಮ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ’ ಎಂಬ ಒಕ್ಕಣೆ ಹೊಂದಿರುವ ಪೋಸ್ಟರ್‌ ಅನ್ನು ಕೊಟ್ಟು ಕಳುಹಿಸುತ್ತಿದ್ದಾರೆ.

ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ಬೆತ್ತದ ರುಚಿ ತೋರಿಸಿ ಸಾಕಾಗಿರುವ ಮಹಿಳಾ ಪೊಲೀಸರು ಈಗ ಈ ಹೊಸ ದಾರಿ ಕಂಡುಕೊಂಡಿದ್ದು, ಎಷ್ಟರಮಟ್ಟಿಗೆ ಫಲ ಕೊಡುತ್ತದೆ ನೋಡಬೇಕಿದೆ.

ADVERTISEMENT

‘ಜನರಿಗೆ ಎಲ್ಲಾ ರೀತಿಯಿಂದಲೂ ಹೇಳಿ ಹೇಳಿ ಸಾಕಾಗಿದೆ. ಇನ್ನೊಂದು ಹೊಸ ಪ್ರಯತ್ನದ ಭಾಗವಾಗಿ ಪೋಸ್ಟರ್‌ ಕೊಡಲಾಗುತ್ತಿದೆ. ಅದರಿಂದಲಾದರೂ ಬದಲಾಗಬಹುದು ಎಂಬ ಭರವಸೆ ಇದೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.