ADVERTISEMENT

ಕೋವಿಡ್ ಲಸಿಕಾ ಅಭಿಯಾನ: ಗುರಿ ಮೀರಿದ ಸಾಧನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:23 IST
Last Updated 18 ಸೆಪ್ಟೆಂಬರ್ 2021, 2:23 IST
ಸಂಡೂರಿನ ಕೇಂದ್ರವೊಂದರಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಹಲವು ವಕೀಲರು ಲಸಿಕೆಯನ್ನು ಹಾಕಿಸಿಕೊಂಡರು
ಸಂಡೂರಿನ ಕೇಂದ್ರವೊಂದರಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಹಲವು ವಕೀಲರು ಲಸಿಕೆಯನ್ನು ಹಾಕಿಸಿಕೊಂಡರು   

ಸಂಡೂರು: ತಾಲ್ಲೂಕಿನ 71 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಕೋವಿಡ್ ಲಸಿಕಾ ಆಭಿಯಾನದಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಲ್ಲೂಕಿನಲ್ಲಿ 16000 ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿತ್ತು. ಸಂಜೆ ವರೆಗೆ 16720 ಜನರಿಗೆ ಲಸಿಕೆಯನ್ನು ಹಾಕಲಾಯಿತು. ಬಳ್ಳಾರಿಯಿಂದ ಹೆಚ್ಚುವರಿಯಾಗಿ 3000 ಲಸಿಕೆಗಳನ್ನು ತರಿಸಿ ಹಾಕಲಾಯಿತು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕುಶಾಲ್ ರಾಜ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT