ADVERTISEMENT

ಬಳ್ಳಾರಿ: ಸಾಂಸ್ಕೃತಿಕ ನುಡಿಸಿರಿ ಸಂಭ್ರಮ ಡಿ. 14ಕ್ಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:46 IST
Last Updated 8 ಡಿಸೆಂಬರ್ 2025, 4:46 IST
ಗಿರಿಯಪ್ಪ ಕೆ.
ಗಿರಿಯಪ್ಪ ಕೆ.   

ಬಳ್ಳಾರಿ: ಕವನ ಸಂಕಲನ ಲೋಕಾರ್ಪಣೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ನುಡಿಸಿರಿ ಸಂಭ್ರಮ- 2025 ಅನ್ನು ಡಿ.14 ರಂದು ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನಸಿರಿ ಫೌಂಡೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಗಿರಿಯಪ್ಪ ಕೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಬೈಲೂರು ಶ್ರೀಶಿವಶರಣ ಮಲ್ಲಪ್ಪ ತಾತ, ಶ್ರೀಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದ ಶ್ರೀಜಡೇಶ ತಾತ, ಸೋಮಸಮುದ್ರ ಶ್ರೀಸಿದ್ಧಲಿಂಗ ದೇಶಿಕರು, ಶ್ರೀಧರಗಡ್ಡೆ ಕೊಟ್ಟೂರುಸ್ವಾಮಿ ಸಂಸ್ಥಾನಮಠ ಶಾಖಾ ವಿರಕ್ತಮಠದ ಮರಿಕೊಟ್ಟೂರು ದೇಶಿಕರು ದಿವ್ಯಸಾನಿಧ್ಯ ವಹಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸುವರು. ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಅಧ್ಯಕ್ಷ  ಎಸ್.ಜೆ.ವಿ.ಮಹಿಪಾಲ್ ಉದ್ಘಾಟಿಸುವರು, ತಿಮ್ಮಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ತಿಳಿಸಿದರು.

ಸಮಾಜ ಸೇವಕರು, ರೈತರು, ಸೈನಿಕರು, ಶಿಕ್ಷಕರು, ವೈದ್ಯರು, ಆಶಾ ಕಾರ್ಯಕರ್ತೆರು, ಕವಿಗಳು ಸೇರಿದಂತೆ ಪಿಯುಸಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದರು.

ADVERTISEMENT

ಜನಸಿರಿ ಫೌಂಡೇಷನ್ ಮುಖಂಡರಾದ ತಿಪ್ಪೇಸ್ವಾಮಿ, ಈರಮ್ಮ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.