ADVERTISEMENT

ನೀರಿನ ಹರಿವು ಇಳಿಮುಖ: ತಗ್ಗಿದ ತುಂಗಭದ್ರಾ ಜಲಾಶಯ ಒಳಹರಿವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 6:44 IST
Last Updated 12 ಜುಲೈ 2020, 6:44 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿತ್ತು -ಪ್ರಜಾವಾಣಿ ಚಿತ್ರ/ಕೆ.ಎಂ. ಕೊಟ್ರೇಶ್‌
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿತ್ತು -ಪ್ರಜಾವಾಣಿ ಚಿತ್ರ/ಕೆ.ಎಂ. ಕೊಟ್ರೇಶ್‌   

ಹೊಸಪೇಟೆ: ಐದು ದಿನಗಳ ನಂತರ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ತಗ್ಗಿದೆ. ಮಂಗಳವಾರದಿಂದ (ಜು.7ರಿಂದ) ಸತತವಾಗಿ ಒಳಹರಿವು ಹೆಚ್ಚಾಗುತ್ತಲೇ ಇತ್ತು. ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದರಿಂದ ಒಳಹರಿವು ಇಳಿಮುಖಗೊಂಡಿದೆ.

ಭಾನುವಾರ 24,497 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. 298 ಕ್ಯುಸೆಕ್‌ ಹೊರಹರಿವು ಇದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,600.55 ಅಡಿ ನೀರಿನ ಸಂಗ್ರಹವಿದೆ.

ಶನಿವಾರ 34,374 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಶುಕ್ರವಾರ 26,007 ಕ್ಯುಸೆಕ್‌, ಗುರುವಾರ 16,211 ಕ್ಯುಸೆಕ್‌, ಬುಧವಾರ 7,321 ಕ್ಯುಸೆಕ್‌ ಹಾಗೂ ಮಂಗಳವಾರ 2,532 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ADVERTISEMENT

‘ಜಲಾಶಯದ ಮೇಲ್ಭಾಗದಲ್ಲಿ ಮಳೆ ಕಡಿಮೆಯಾಗಿದೆ. ತುಂಗಾ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ತಗ್ಗಿದೆ. ಇದು ಒಳಹರಿವು ತಗ್ಗಲು ಪ್ರಮುಖ ಕಾರಣ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.