ADVERTISEMENT

ಬಳ್ಳಾರಿ | ದೀಪಾವಳಿಗೆ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:14 IST
Last Updated 31 ಅಕ್ಟೋಬರ್ 2024, 14:14 IST
ಬಳ್ಳಾರಿ ನಗರದ ಐಟಿಐ ಕಾಲೇಜು ಮೈದಾನದಲ್ಲಿನ ಹಾಕಲಾಗಿದ್ದ ಪಟಾಕಿ ಮಳಿಗೆಗಳಲ್ಲಿ ಗುರುವಾರ ಕಂಡುಬಂದ ಜನಸಂದಣಿ  
ಬಳ್ಳಾರಿ ನಗರದ ಐಟಿಐ ಕಾಲೇಜು ಮೈದಾನದಲ್ಲಿನ ಹಾಕಲಾಗಿದ್ದ ಪಟಾಕಿ ಮಳಿಗೆಗಳಲ್ಲಿ ಗುರುವಾರ ಕಂಡುಬಂದ ಜನಸಂದಣಿ     

ಬಳ್ಳಾರಿ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿದೆ.

ಪಟಾಕಿ ಕೊಳ್ಳಲು ಜನರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ನಗರದ ಐಟಿಐ ಕಾಲೇಜು ಮೈದಾನದಲ್ಲಿ ಕಂಡುಬಂತು. ಮೈದಾನದಲ್ಲಿ ಹಾಕಿದ್ದ 20 ಮಳಿಗೆಗಳಲ್ಲೂ ಜನರು ಸಡಗರದಿಂದ ಪಟಾಕಿ ಖರೀದಿಯಲ್ಲಿ ತೊಡಗಿದ್ದರು.

ನಗರದ ಎಪಿಎಂಸಿ ಮಾರುಕಟ್ಟೆ, ಬೆಂಗಳೂರು ರಸ್ತೆ, ಕನಕ ದುರ್ಗಮ್ಮ ದೇವಸ್ಥಾನ ಬಳಿ, ಹೂವಿನ ಮಾರುಕಟ್ಟೆ, ಕೌಲ್ ಬಜಾರ್‌, ಗಾಂಧಿನಗರ ಮಾರುಕಟ್ಟೆಯಲ್ಲಿ ಜನ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಗ್ನರಾಗಿದ್ದದ್ದು ಕಂಡು ಬಂತು. ಹಣ್ಣು- ತರಕಾರಿ‌, ಹೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ.

ADVERTISEMENT
ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಜನರು ಬಾಳೆದಿಂಡು ಖರೀದಿಸಿದರು
ದೀಪಾವಳಿ ಹಬ್ಬಕ್ಕಾಗಿ ಬಳ್ಳಾರಿ ನಗರ ಕುಂಬಾರ ಓಣಿಯಲ್ಲಿ ಹಣತೆಗಳ ಖರೀದಿಯಲ್ಲಿ ಮಗ್ನರಾಗಿದ್ದ ಜನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.