ADVERTISEMENT

ಕಂಪ್ಲಿ : ಸಿವಿಲ್ ನ್ಯಾಯಾಲಯ ಆರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:12 IST
Last Updated 8 ಅಕ್ಟೋಬರ್ 2025, 7:12 IST
   

ಕಂಪ್ಲಿ: ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮತ್ತು ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಿವಿಲ್ ನ್ಯಾಯಾಲಯ ಆರಂಭಕ್ಕೆ ಆದೇಶವಾಗಿ ಒಂದೂವರೆ ವರ್ಷವಾದರೂ ಇನ್ನೂ ಆರಂಭಗೊಂಡಿಲ್ಲ. ಈ ಕಾರಣದಿಂದ ವಕೀಲರು, ಸಾರ್ವಜನಿಕರು 50 ಕಿ.ಮೀ ದೂರದ ಬಳ್ಳಾರಿ ನ್ಯಾಯಾಲಯಕ್ಕೆ ತೆರಳಬೇಕಿದೆ. ನ್ಯಾಯಾಲಯಕ್ಕಾಗಿ ಕಟ್ಟಡ ಒದಗಿಸಲು ಪುರಸಭೆಯಲ್ಲಿ ಠರಾವ್ ಮಂಡಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿದೆ. ಈ ಕುರಿತು ಗಮನಹರಿಸುವಂತೆ ವಕೀಲರು ಶಾಸಕರಿಗೆ ಮನವರಿಕೆ ಮಾಡಿದರು.

ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ. ಪ್ರಭಾಕರ ರಾವ್, ಪದಾಧಿಕಾರಿಗಳಾದ ರಘುನಾಥ ರಾವ್, ಎಚ್. ನಾಗರಾಜ, ಹರೀಶ್ ಅಯೋದಿ, ಮರಿಶೆಟ್ರು ವಿಜಯಲಕ್ಷ್ಮಿ, ಅಯ್ಯಪ್ಪ, ರುದ್ರಪ್ಪ, ಜಗದೀಶ, ಟಿ. ಶಿವಪ್ಪ, ಎಚ್. ಹುಲುಗಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.