ADVERTISEMENT

ಬಳ್ಳಾರಿ: ಕಾರ್ಮಿಕ ವಿರೋಧಿ ಕಾನೂನು ಹಿಂಪಡೆಯಲು ಆಗ್ರಹ, ಪ್ರತಿಭಟನೆ

ಜೆಸಿಟಿಯು ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 15:51 IST
Last Updated 23 ಸೆಪ್ಟೆಂಬರ್ 2024, 15:51 IST
ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕಾರ್ಮಿಕ ಸಂಘಟನೆಗಳು ನೀಡಿದ್ದ ಪ್ರತಿಭಟನಾ ಕರೆಗೆ ಓಗೊಟ್ಟು, ಜೆಸಿಟಿಯು ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಲಾಯಿತು
ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕಾರ್ಮಿಕ ಸಂಘಟನೆಗಳು ನೀಡಿದ್ದ ಪ್ರತಿಭಟನಾ ಕರೆಗೆ ಓಗೊಟ್ಟು, ಜೆಸಿಟಿಯು ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಲಾಯಿತು   

ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕಾರ್ಮಿಕ ಸಂಘಟನೆಗಳು ನೀಡಿದ್ದ ಪ್ರತಿಭಟನಾ ಕರೆಗೆ ಓಗೊಟ್ಟು, ಜೆಸಿಟಿಯು ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಲಾಯಿತು.  

‘ಪ್ರಜಾಪ್ರಭುತ್ವ ಮಾದರಿ ದೇಶದಲ್ಲಿರುವ ಕಾರ್ಮಿಕರ ಹಕ್ಕುಗಳಾದ ಸಂಘಟನೆಯ ಹಕ್ಕು, ಮುಷ್ಕರದ ಹಕ್ಕು ಅಗತ್ಯ ಕನಿಷ್ಠ ವೇತನ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಹಕ್ಕನ್ನು ಉಳಿಸಲು ಇಂದು ದೇಶದ್ಯಾಂತ ಜೆಸಿಟಿಯು ಪ್ರತಿಭಟನೆ ಹಮ್ಮಿಕೊಂಡಿದೆ. ಅದರ ಭಾಗವಾಗಿ ಬಳ್ಳಾರಿಯಲ್ಲಿ ಜೆಸಿಟಿಯು ನೇತೃತ್ವದಲ್ಲಿ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿವೆ. ಈ ಕೂಡಲೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಲಾಯಿತು. 

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಜೆ.ಸತ್ಯಬಾಬು, ಕಾರ್ಯದರ್ಶಿ ಚೆನ್ನಬಸಯ್ಯ, ಎಲ್.ಐ.ಸಿ ಯುನಿಯನ್ ಮುಖಂಡ ಸೂರ್ಯನಾರಾಯಣ, ಎಐಯುಟಿಯುಸಿ ಮುಖಂಡ ಡಾ.ಪ್ರಮೋದ್.ಎನ್ ಹಾಗೂ ಎ.ಶಾಂತಾ, ಬಿಸಿಯೂಟ ಯುನಿಯನ್‌ನ ದುರ್ಗಮ್ಮ, ಸುರೇಶ್.ಜಿ. ಕಮಲ್, ಆಶ್ರಫ್, ಚಿಟ್ಟಮ್ಮ, ಹುಲುಗಪ್ಪ, ಓಂಕಾರಮ್ಮ, ನಾಗರತ್ನ, ನಾಗಲಕ್ಷ್ಮೀ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.