ADVERTISEMENT

ಮದ್ಯದ ಅಂಗಡಿ ಸ್ಥಳಾಂತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 12:24 IST
Last Updated 20 ಜೂನ್ 2019, 12:24 IST
ಮದ್ಯದಂಗಡಿ ಸ್ಥಳಾಂತರಿಸುವಂತೆ ಆಗ್ರಹಿಸಿ ನಾಗೇನಹಳ್ಳಿ ಗ್ರಾಮಸ್ಥರು ಅಬಕಾರಿ ಇನಸ್ಪೆಕ್ಟರ್‌ಗೆ ಮನವಿ ಪತ್ರ ಸಲ್ಲಿಸಿದರು
ಮದ್ಯದಂಗಡಿ ಸ್ಥಳಾಂತರಿಸುವಂತೆ ಆಗ್ರಹಿಸಿ ನಾಗೇನಹಳ್ಳಿ ಗ್ರಾಮಸ್ಥರು ಅಬಕಾರಿ ಇನಸ್ಪೆಕ್ಟರ್‌ಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ತಾಲ್ಲೂಕಿನ ನಾಗೇನಹಳ್ಳಿಯಲ್ಲಿರುವ ಮದ್ಯದ ಅಂಗಡಿಯನ್ನು ಗ್ರಾಮದಿಂದ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೇ ನಂ. 24/ಸಿ ಕೃಷಿ ಜಮೀನಿನಲ್ಲಿ ಮದ್ಯದಂಗಡಿ ತೆರೆಯಲಾಗಿದೆ. ಅಲ್ಲಿಂದ ನೂರು ಮೀಟರ್‌ ದೂರದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಕೃಷಿ ಕೂಲಿ ಕಾರ್ಮಿಕರು ನಿತ್ಯ ಅದೇ ಮಾರ್ಗದಲ್ಲಿ ಓಡಾಡುತ್ತಾರೆ. ದಿನವಿಡೀ ಗಳಿಸಿದ ಹಣವನ್ನು ಕೆಲವರು ಮದ್ಯ ಕುಡಿಯಲು ವ್ಯಯಿಸುತ್ತಿದ್ದಾರೆ. ಅವರ ಕುಟುಂಬ ಬೀದಿಗೆ ಬಂದಿವೆ. ಕೂಡಲೇ ಅದನ್ನು ಸ್ಥಳಾಂತರಿಸಬೇಕು ಎಂದು ಅಬಕಾರಿ ಇನ್‌ಸ್ಪೆಕ್ಟರ್‌ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಮದ್ಯ ಕುಡಿದು ಕೆಲವರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇಡೀ ಗ್ರಾಮದ ವಾತಾವರಣ ಹಾಳಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು‘ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯೆನಾಗವೇಣಿ ಬಸವರಾಜ, ಗ್ರಾಮಸ್ಥರಾದಬಿ.ಚಂದ್ರಶೇಖರ್, ಡಿ.ಚನ್ನಪ್ಪ, ಎಸ್.ಕಳಕಪ್ಪ, ಎನ್.ಬಸವರಾಜ, ಕೆ.ಸೋಮಶೇಖರ್, ಚಂದ್ರಪ್ಪ, ಬಿ.ನೀಲಪ್ಪ, ರಾಘವೇಂದ್ರ ಟಿ.ಆರ್. ಎರ್ರಿಸ್ವಾಮಿ, ಟಿ.ಆರ್. ಕೆ. ಕುಮಾರಪ್ಪ, ಜಿ.ಗಂಗಪ್ಪ, ಕೆ.ಕುಮಾರಪ್ಪ ಮನವಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.