ADVERTISEMENT

ದೇವಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ₹1.51 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:49 IST
Last Updated 25 ಸೆಪ್ಟೆಂಬರ್ 2025, 2:49 IST
ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ  ಸಭೆಯಲ್ಲಿ ಎಸ್.ಎಸ್. ನಾಗರಾಜ ಮಾತನಾಡಿದರು  
ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ  ಸಭೆಯಲ್ಲಿ ಎಸ್.ಎಸ್. ನಾಗರಾಜ ಮಾತನಾಡಿದರು     

ಕಂಪ್ಲಿ: ‘ತಾಲ್ಲೂಕಿನ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ₹1.51 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್. ನಾಗರಾಜ ಹೇಳಿದರು.

ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಮಹಾಜನ ಸಭೆಯಲ್ಲಿ ಮಾತನಾಡಿದ ಅವರು, ‘ 2,039 ಸದಸ್ಯರಿದ್ದಾರೆ. ₹75.99 ಲಕ್ಷ ಷೇರು ಬಂಡವಾಳ, ₹96.99 ಲಕ್ಷ ಠೇವಣಿ, ₹42.31 ಲಕ್ಷ ಮಧ್ಯಮಾವಧಿ ಸಾಲ ನೀಡಲಾಗಿದ್ದು, ರಾಜ್ಯ ಸರ್ಕಾರದಿಂದ ₹40.46 ಲಕ್ಷ ಸಾಲ ಮನ್ನಾ ಮೊತ್ತ ಬರಬೇಕಿದೆ’ ಎಂದು ವಿವರಿಸಿದರು.

ಸಂಘದ ಅಧ್ಯಕ್ಷ ಪಿ. ನೀಲಕಂಠಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಣಾಪುರ ಪಾರ್ವತಿ, ನಿರ್ದೇಶಕರಾದ ಕೆ. ತಿಪ್ಪೇರುದ್ರಪ್ಪ, ಸಿ.ಕೆ. ಸೋಮಶೇಖರ, ಜಿ. ಕಡೆಮನಿ ನಾಗರಾಜ, ಕೊರವರ ಹುಲುಗಪ್ಪ, ಈ. ಅನ್ನಪೂರ್ಣ, ಜಿ. ಗಣೇಶಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಅಳ್ಳಳ್ಳಿ ಮಂಜುನಾಥ, ನಾಯಕರ ತಿಪ್ಪೇಸ್ವಾಮಿ, ಗಾದಿಗನೂರು ಹಂಪಮ್ಮ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.