
ಕುರುಗೋಡು: ಸಂಘಟನೆಯ ಶಕ್ತಿ ದುರುದ್ದೇಶ ಮತ್ತು ಧ್ವೇಷ ಸಾಧನೆಗಾಗಿ ಬಳಕೆಯಾಗದೆ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಿ ಎಂದು ಪಿಎಸ್‍ಐ ಸುಪ್ರಿತ್ ಸಲಹೆ ನೀಡಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‍ಎಸ್ ಡಿಜೆಸಾಗರ್ ಬಣ) ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಸಂಘಟನೆಯಲ್ಲಿ ಗುರುತಿಸಿಕೊಂಡು ಸರಿದಾರಿಯಲ್ಲಿ ನಡೆದು ಸಮಾಜಕ್ಕೆ ಆದರ್ಶವಾಗಬೇಕು. ಶಿಕ್ಷಣ ದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸುವ ಕೆಲಸ ಎಂದರು.
ದಲಿತ ಸಂಘರ್ಷ ಸಮಿತಿ (ಡಿಜೆ ಸಾಗರ್ ಬಣ) ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕ ಗಂಗಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸಂಘಟನೆ ಪರಿಶಿಷ್ಟರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವರ್ಗದ ಶೋಷಿತರ ನೋವಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ನೊಂದವರು ಸಂಘಟನೆ ಎದುರು ನೋವು ತೋಡಿಕೊಂಡರೆ ಅವರಿಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂದರು.
ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಮಾತನಾಡಿದರು.
ತಾಲ್ಲೂಕು ಸಂಚಾಲಕ ಎಚ್. ಬಸವರಾಜ, ಖಜಾಂಚಿ ಎಚ್. ತಿಮ್ಮಪ್ಪ, ಸಂಘಟನಾ ಸಂಚಾಲಕರಾದ ಬಿ. ಬಾಬು, ಎಚ್. ರಾಮಾಂಜಿನಿ, ಎಚ್.ಕರಿಯಪ್ಪ, ಬಿಳಿಬಾಯಪ್ಪ, ಎಚ್. ಕರಿಬಸವ ಮತ್ತು ಎಸ್. ರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.