ADVERTISEMENT

‘ಕ್ಷಯ ಮುಕ್ತ’ಕ್ಕಾಗಿ ಕಾರ್ಯತಂತ್ರ: ಟಿಎಚ್‌ಒ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 15:38 IST
Last Updated 30 ಜೂನ್ 2023, 15:38 IST
ಸಿರುಗುಪ್ಪದಲ್ಲಿ ನಡೆದ ಕ್ಷಯಮುಕ್ತ ಗ್ರಾಮ ಪಂಚಾಯ್ತಿ ಅನುಷ್ಠಾನ ತರಬೇತಿ ಕಾರ್ಯಗಾರದಲ್ಲಿ ಟಿ.ಎಚ್.ಒ ಡಾ.ಈರಣ್ಣ ಮಾತನಾಡಿದರು
ಸಿರುಗುಪ್ಪದಲ್ಲಿ ನಡೆದ ಕ್ಷಯಮುಕ್ತ ಗ್ರಾಮ ಪಂಚಾಯ್ತಿ ಅನುಷ್ಠಾನ ತರಬೇತಿ ಕಾರ್ಯಗಾರದಲ್ಲಿ ಟಿ.ಎಚ್.ಒ ಡಾ.ಈರಣ್ಣ ಮಾತನಾಡಿದರು   

ಸಿರುಗುಪ್ಪ: ‘ದೇಶವನ್ನು 2025ರೊಳಗೆ ಕ್ಷಯ ಮುಕ್ತಗೊಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಸಿರುಗುಪ್ಪ ತಾಲ್ಲೂಕನ್ನು ಕ್ಷಯರೋಗ ಮುಕ್ತಗೊಳಿಸಲು ಕಾರ್ಯತಂತ್ರಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಟಿ.ಎಚ್.ಒ ಡಾ.ಈರಣ್ಣ ಹೇಳಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಷಯಮುಕ್ತ ಗ್ರಾಮ ಪಂಚಾಯ್ತಿ ಅನುಷ್ಠಾನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಗಳು ಜಂಟಿಯಾಗಿ ಕ್ಷಯ ನಿವಾರಣಾ ಆಂದೋಲನ, ಕ್ಷಯ ಆಸರೆ ಹಾಗೂ ಟಿ.ಬಿ. ಸೋಲಿಸಿ ಗ್ರಾಮ ಪಂಚಾಯಿತಿ ಗೆಲ್ಲಿಸುವಂತ ಕಾರ್ಯಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಆರೋಗ್ಯ ಇಲಾಖೆಯಿಂದ ಕ್ಷಯ ಮುಕ್ತ ಸಿರುಗುಪ್ಪವನ್ನಾಗಿಸಲು ಕಾರ್ಯತಂತ್ರ ಯೋಜನೆ ಅನುಷ್ಠಾನಗೊಳಿಸಲು ಅಗತ್ಯ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಲಾಯಿತು.

ತಾಲ್ಲೂಕು ಪಂಚಾಯ್ತಿ ಇ.ಒ. ಮಗಡಗಿನ ಬಸಪ್ಪ, ಎ.ಇ.ಒ. ಬಸವರಾಜ, ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.