ಸಿರುಗುಪ್ಪ (ಬಳ್ಳಾರಿ): ನಗರದ ಸಂಗೀತ ಕಲಾವಿದ, ಮಲ್ಕಾಪುರದ ದೊಡ್ಡಬಸವಾರ್ಯ ಗವಾಯಿ (92) ಬುಧವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಆರು ಜನ ಪುತ್ರಿಯರು ಇದ್ದಾರೆ.
ಗದುಗಿನ ಡಾ.ಪುಟ್ಟರಾಜ ಗವಾಯಿಗಳವರ ಹಿರಿಯ ಶಿಷ್ಯರಾಗಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ನಗರದಲ್ಲಿ ಸಂಗೀತ ಪಾಠಶಾಲೆ ನಡೆಸುತ್ತಿದ್ದರು.
ಗುರುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರ ಮಹಾದೇವ ಗವಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.