ADVERTISEMENT

ಹೂವಿನಹಡಗಲಿ: ಕುಡಿಯುವ ನೀರಿಗಾಗಿ ಪರದಾಟ

ನಂದಿಹಳ್ಳಿ ಪ್ಲಾಟ್‌ನಲ್ಲಿ 20 ದಿನಗಳಿಂದ ನೀರಿನ ಸಮಸ್ಯೆ: 300 ಕುಟುಂಬಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:38 IST
Last Updated 31 ಡಿಸೆಂಬರ್ 2023, 15:38 IST
<div class="paragraphs"><p>ಹೂವಿನಹಡಗಲಿ ತಾಲ್ಲೂಕು ನಂದಿಹಳ್ಳಿ ಪ್ಲಾಟ್‌ನಲ್ಲಿ ಟ್ಯಾಂಕರ್‌ ನೀರಿಗಾಗಿ ನಿವಾಸಿಗಳು ಮುಗಿಬಿದ್ದಿದ್ದರು</p></div>

ಹೂವಿನಹಡಗಲಿ ತಾಲ್ಲೂಕು ನಂದಿಹಳ್ಳಿ ಪ್ಲಾಟ್‌ನಲ್ಲಿ ಟ್ಯಾಂಕರ್‌ ನೀರಿಗಾಗಿ ನಿವಾಸಿಗಳು ಮುಗಿಬಿದ್ದಿದ್ದರು

   

ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಪ್ಲಾಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.

ಪ್ಲಾಟ್‌ಗೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಬತ್ತಿ ಹೋಗಿದ್ದು, 20 ದಿನಗಳಿಂದ ನೀರಿನ ಅಭಾವ ತಲೆದೋರಿದೆ. 300ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆ ಉಂಟಾಗಿದೆ.

ADVERTISEMENT

13 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಂದಿಹಳ್ಳಿ ಒಳಪಟ್ಟಿದೆ. ಈ ಯೋಜನೆ ಕಾರ್ಯಗತಗೊಂಡು ದಶಕ ಕಳೆದರೂ ಗ್ರಾಮಕ್ಕೆ ನದಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಇಲ್ಲಿನ ಜನರು ಪ್ಲೋರೈಡ್‌ಯುಕ್ತ ಕೊಳವೆಬಾವಿ ನೀರು ಸೇವಿಸುವುದು ಅನಿವಾರ್ಯವಾಗಿದೆ.

ಪ್ಲಾಟ್‌ಗೆ ನೀರು ಪೂರೈಸಲು ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದರೂ ಅದಕ್ಕೆ ಮೋಟಾರ್ ಅಳವಡಿಸಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೆಲ ತಿಂಗಳ ಹಿಂದೆ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಹಣಕಾಸು ವ್ಯವಹಾರಕ್ಕೆ ತಡೆ ಬಿದ್ದಿದೆ.

ಹೂವಿನಹಡಗಲಿ ತಾಲ್ಲೂಕು ನಂದಿಹಳ್ಳಿ ಪ್ಲಾಟ್‌ ನಿವಾಸಿಗಳು ಟ್ಯಾಂಕರ್‌ನಿಂದ ನೀರು ಪಡೆದರು

‘ಗ್ರಾಮ ಪಂಚಾಯಿತಿಯವರು ಸಮಯ ಸಿಕ್ಕಾಗ ನೀರಿನ ಟ್ಯಾಂಕರ್ ತಂದು ಪ್ಲಾಟ್‌ನಲ್ಲಿ ನಿಲ್ಲಿಸುತ್ತಾರೆ. ಕೂಲಿ ಕೆಲಸಕ್ಕೆ ಹೋಗುವ ಜನರಿಗೆ ನೀರು ಸಿಗುವುದಿಲ್ಲ. ಅವರು ಹತ್ತಿರದ ಹೊಲ, ಗದ್ದೆಗಳಿಗೆ ಹೋಗಿ ನೀರು ತರುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು’ ಎಂದು ಪ್ಲಾಟ್ ನಿವಾಸಿಗಳಾದ ವೀರೇಶ, ವಿ.ಬಿ.ಶರಣಪ್ಪ, ಅಂಕಮ್ಮನಹಳ್ಳಿ ಕೊಟ್ರೇಶ ಆಗ್ರಹಿಸಿದ್ದಾರೆ.

ನಂದಿಹಳ್ಳಿ ಪ್ಲಾಟ್‌ಗಾಗಿ ಹೊಸ ಬೋರ್‌ವೆಲ್ ಕೊರೆಸಲಾಗಿದೆ. ಮೋಟಾರ್ ಅಳವಡಿಸಿ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ
–ಪರಮೇಶ್ವರಪ್ಪ ಪಿಡಿಒ ನಂದಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.