ADVERTISEMENT

ರಾಗಿ ಹೆಲ್ಥ್ ಮಿಕ್ಸ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ .

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:07 IST
Last Updated 22 ಫೆಬ್ರುವರಿ 2024, 16:07 IST
ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಅಕ್ಕಿ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ ಹಿರೇಮಠ ರಾಗಿ ಮಾಲ್ಟ್ ನೀಡುವ ಮೂಲಕ ಚಾಲನೆ ನೀಡಿದರು
ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಅಕ್ಕಿ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ ಹಿರೇಮಠ ರಾಗಿ ಮಾಲ್ಟ್ ನೀಡುವ ಮೂಲಕ ಚಾಲನೆ ನೀಡಿದರು   

ಸಂಡೂರು: ತಾಲ್ಲೂಕಿನ ಕೃಷ್ಣಾನಗರ ಸರ್ಕಾರಿ‌ ಪ್ರೌಢಶಾಲೆ ಆವರಣದಲ್ಲಿ ಗುರುವಾರ ರಾಗಿ ಹೆಲ್ಥ್ ಮಿಕ್ಸ್ ವಿತರಣೆ ಕಾರ್ತಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ‌ಆರ್ ಅಕ್ಕಿ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಿದರು.

ಮಕ್ಕಳಲ್ಲಿ ಆರೋಗ್ಯ ವೃದ್ಧಿ, ಶಕ್ತಿ ವರ್ಧನೆಯ ದೃಷ್ಠಿಯಿಂದ ಸರ್ಕಾರವು ರಾಗಿ ಮಾಲ್ಟ್ ವಿತರಿಸುತ್ತಿದೆ. ಪ್ರತಿಷ್ಠಿತ ಕಂಪನಿಗಳಿಂದ ದೃಡೀಕೃತಗೊಂಡ ಉತ್ಕೃಷ್ಟ ಗುಣಮಟ್ಟದ ರಾಗಿ ಹಿಟ್ಟಿನಿಂದ ಮಾಲ್ಟ್ ತಯಾರಿಸಲಾಗುತ್ತಿದ್ದು, ಮಾರ್ಚ್ 1ರಿಂದ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ವಾರದ ಮೂರು ದಿನಗಳ ಕಾಲ ವಿತರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಬಿಸಿಯೂಟ ಯೋಜನಾಧಿಕಾರಿ ಶ್ರೀಧರ್ ಮೂರ್ತಿ, ಶ್ರೀಕಂಠ ಹಿರೇಮಠ್, ಕೃಷ್ಣಾನಗರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ ದೇವೇಂದ್ರಪ್ಪ, ಶಿಕ್ಷಕಿ ಮಹಾಲಕ್ಷ್ಮಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಆಶಾಬೀ, ಮುಖ್ಯ ಶಿಕ್ಷಕರಾದ ಗುರುರಾಜ್, ಸೈಫುಲ್ಲಾ ಖದರ್, ನಾಗಪ್ಪ ದೇವರಮನೆ, ಶ್ರೀನಿವಾಸ್, ಚಂದ್ರಶೇಖರ್ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ರೆಡ್ಡಿ ಬಾಬು, ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಸುಭಾನ್, ಅಬ್ದುಲ್ ರಝಾಕ್ ಭಾಗವಹಿಸಿದ್ದರು.

ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಅಕ್ಕಿ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ ಹಿರೇಮಠ್ ರಾಗಿ ಮಾಲ್ಟ್ ನೀಡುವ ಮೂಲಕ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.