
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಹರಪನಹಳ್ಳಿ: ನಗರದ ಗುಂಡಿನಕೇರಿ ನಿವಾಸಿ ರೈತ ದಾದಾಪುರ ಹನುಮಂತಪ್ಪ (75) ಸಾಲ ತೀರಿಸಲಾಗದೆ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಎಲ್‍ಡಿ ಬ್ಯಾಂಕ್ ನಲ್ಲಿ ₹1 ಲಕ್ಷ ಸಾಲ, ಕೆನರಾ ಬ್ಯಾಂಕ್‌ನಿಂದಲೂ ಸಾಲ ಪಡೆದಿದ್ದರು. ಕೈ ಸಾಲ ₹2 ಲಕ್ಷ ಪಡೆದಿದ್ದರು. ಇವುಗಳನ್ನು ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.