ADVERTISEMENT

ವಿಜೃಂಭಣೆಯಿಂದ ಜರುಗಿದ ಮರುಳಸಿದ್ಧೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:56 IST
Last Updated 14 ಮಾರ್ಚ್ 2024, 14:56 IST
14ಕೆಟಿಆರ್ ಇಪಿ2- ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಗುರುವಾರ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ಜರುಗಿತು.
14ಕೆಟಿಆರ್ ಇಪಿ2- ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಗುರುವಾರ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ಜರುಗಿತು.   

ಕೊಟ್ಟೂರು: ತಾಲ್ಲೂಕಿನ ತೂಲಹಳ್ಳಿ ಗ್ರಾಮದ ವಿಶ್ವಬಂಧು ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಲ್ಲಿ ಅರ್ಚಕರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಶ್ರೀ ಸ್ವಾಮಿಯನ್ನು ಪಲ್ಲಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಸಕಲ ಮಂಗಲವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ರಥ ಬಯಲಿಗೆ ಪಲ್ಲಕ್ಕಿ ಉತ್ಸವ ಸಾಗಿ ರಥದ ಸುತ್ತ ಪ್ರದಕ್ಷಿಣೆ ಹಾಕಿ ಸ್ವಾಮಿ ರಥವೇರುತ್ತಿದ್ದಂತೆ ಭಕ್ತರ ಜಯ ಘೋಷ ಮೊಳಗಿತು.

ರಥ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ರಥಕ್ಕೆ ಬಾಳೆ ಹಣ್ಣು, ಉತ್ತುತ್ತಿ ತೂರಿ ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಸ್ವಾಮಿಯ ಪಟಾಕ್ಷಿ ಹರಾಜಿನಲ್ಲಿ ಉಜ್ಜಪ್ಳ ಪ್ರದೀಪ್ ಇವರು ₹1,35,101ಗೆ ಪಡೆದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.