ADVERTISEMENT

ಬಳ್ಳಾರಿ ಜೈಲಿಗೆ ಸಿಮ್‌ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 17:41 IST
Last Updated 7 ಡಿಸೆಂಬರ್ 2025, 17:41 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಅಣ್ಣನನ್ನು ನೋಡಲು ಬಂದಾಗ ಸಿಮ್‌ ಕಾರ್ಡ್‌ ತಂದಿದ್ದ ಆತನ ಸಹೋದರನ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ವೈ.ಕಗ್ಗಲ್‌ನ ಲಿಂಗರಾಜು (24) ವಿರುದ್ಧ ಪ್ರಕರಣ ದಾಖಲಾಗಿದೆ.  ಈತ ಜೈಲಿನಲ್ಲಿರುವ ತನ್ನ ಅಣ್ಣ ರವಿ ನೋಡಲು ಲಿಂಗರಾಜು ಡಿ.4ರಂದು ಜೈಲಿಗೆ ಬಂದಿದ್ದ. ಆತನನ್ನು ಜೈಲಿನ ಮುಖ್ಯದ್ವಾರದ ಬಳಿ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಆತನ ಬಳಿ ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ ಪತ್ತೆಯಾಗಿದೆ. 

ಜೈಲು ನಿಯಮಗಳ ಪ್ರಕಾರ ಸಿಮ್‌ ಕಾರ್ಡ್‌ ನಿಷೇಧಿತ ವಸ್ತು. ಲಿಂಗರಾಜು ವಿರುದ್ಧ ಜೈಲು ಸಿಬ್ಬಂದಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.