ADVERTISEMENT

ಕುರುಗೋಡು | ಹರಕೆ: ಅಗ್ನಿಕುಂಡದಲ್ಲಿ ನಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 6:44 IST
Last Updated 3 ನವೆಂಬರ್ 2025, 6:44 IST
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ವೀರಭದ್ರೇಶ್ವರ ಅಗ್ನಿಕುಂಡದಲ್ಲಿ ನಡೆದು ಪುರವಂತರು, ಭಕ್ತರು ನಡೆದು  ಹರಕೆ ತೀರಿಸಿದರು
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ವೀರಭದ್ರೇಶ್ವರ ಅಗ್ನಿಕುಂಡದಲ್ಲಿ ನಡೆದು ಪುರವಂತರು, ಭಕ್ತರು ನಡೆದು  ಹರಕೆ ತೀರಿಸಿದರು   

ಕುರುಗೋಡು: ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾಪುರಾಣ ಮುಕ್ತಾಯದ ಅಂಗವಾಗಿ ವೀರಭದ್ರೇಶ್ವರ ಅಗ್ನಿಕುಂಡ ಕಾರ್ಯಕ್ರಮ ಭಾನುವಾರ ಜರುಗಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮಡಿಬಟ್ಟೆ ತೊಟ್ಟು ಅಗ್ನಿಕುಂಡದಲ್ಲಿ ನಡೆದು ಭಕ್ತಿ ಮೆರೆದರು. ಇದಕ್ಕೂ ಮೊದಲು ಸುಮಂಗಳೆಯರು ಪುರವಂತರೊಡಗೂಡಿ ಗಂಗೆಸ್ಥಳಕ್ಕೆ ತೆರಳಿ ನೀರನ್ನು ಮೆರವಣಿಗೆಯಲ್ಲಿ ತಂದು ವೀರಭದ್ರೇಶ್ವರ ಸ್ವಾಮಿಗೆ ಸಮರ್ಪಿಸಿದರು. ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

11 ದಿನಗಳ ಕಾಲ ಜರುಗಿದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾಪುರಾಣ ಭಾನುವಾರ ಮುಕ್ತಾಯಗೊಂಡಿತು. ಕೆ.ಮೌನೇಶ್ ಆಚಾರ್ ಪುರಾಣ ಪ್ರವಚನ ನೀಡಿದರು. ಪಿ.ಮಂಜುನಾಥ ಪುರಾಣ ಪಠಣ ಮಾಡಿದರು. ವೈ.ನಾಗೇಶ್ ಸಂಗೀತಸೇವೆ ಸಲ್ಲಿಸಿದರು. ಕೆ.ಕರಿಬಸವನಗೌಡ ಹಾರ್ಮೋನಿಯಂ ನುಡಿಸಿದರು. ಎಚ್.ಮಲ್ಲಿಗೌಡ ಮತ್ತು ಎಂ.ಪಾಂಡುರಂಗ ತಬಲಾ ಸಾಥ್ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.