ADVERTISEMENT

ಇವರ ಮನೆ ವಿದೇಶಿ ಕರೆನ್ಸಿಗಳ ಸಂಗ್ರಹಾಲಯ

ಸಂಗ್ರಹದಲ್ಲಿವೆ ₹5 ಲಕ್ಷ ಮೌಲ್ಯದ 70ಕ್ಕೂ ಹೆಚ್ಚು ದೇಶಗಳ ನೋಟು, ನಾಣ್ಯಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2022, 7:47 IST
Last Updated 9 ಮೇ 2022, 7:47 IST
ತಮ್ಮ ಸಂಗ್ರಹದ ವಿದೇಶಿ ಕರೆನ್ಸಿ, ನಾಣ್ಯ ಹಾಗೂ ಅಂಚೆ ಚೀಟಿಗಳೊಂದಿಗೆ ಕೃಷ್ಣ ಎಲ್.ಬಾಕಳೆ
ತಮ್ಮ ಸಂಗ್ರಹದ ವಿದೇಶಿ ಕರೆನ್ಸಿ, ನಾಣ್ಯ ಹಾಗೂ ಅಂಚೆ ಚೀಟಿಗಳೊಂದಿಗೆ ಕೃಷ್ಣ ಎಲ್.ಬಾಕಳೆ   

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ಈ ಅಧಿಕಾರಿಯ ಮನೆ ನಮ್ಮ, ನಿಮ್ಮಂತೆಯೇ ಸಾಮಾನ್ಯವಾದುದು. ಆದರೆ, ಇಲ್ಲಿ 70ಕ್ಕೂ ಹೆಚ್ಚು ದೇಶಗಳ ಕರೆನ್ಸಿ, ನಾಣ್ಯಗಳನ್ನು ನೋಡಬಹುದು. ವಿದೇಶಿ ಕರೆನ್ಸಿಗಳ ಸಂಗ್ರಹಾಲಯ ಎಂದರೂ ತಪ್ಪಾಗಲಾರದು.

ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಪರಿವೀಕ್ಷಣ ಅಧಿಕಾರಿಯಾಗಿರುವ ಪಟ್ಟಣದ ಕೃಷ್ಣ ಎಲ್.ಬಾಕಳೆ ಅವರ ಮನೆಯಲ್ಲಿ ಬರೋಬ್ಬರಿ ₹5 ಲಕ್ಷ ಮೌಲ್ಯದ 70ಕ್ಕೂ ಹೆಚ್ಚು ದೇಶಗಳ ನೋಟು, ನಾಣ್ಯಗಳ ಸಂಗ್ರಹಗಳಿವೆ.

ಅಮೆರಿಕ, ಜಪಾನ್, ರಷ್ಯಾ, ಸಿಂಗಪುರ, ಶ್ರೀಲಂಕಾ, ಇಂಗ್ಲೆಂಡ್, ಜರ್ಮನಿ, ಬ್ರೆಜಿಲ್, ಬಾಂಗ್ಲಾದೇಶ, ಇರಾನ್, ಮಲೇಷ್ಯಾ, ಚೀನಾ, ಕೆನಡಾ, ಇಂಡೋನೇಷ್ಯಾ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಕರೆನ್ಸಿಗಳು ಇವರ ಸಂಗ್ರಹದಲ್ಲಿವೆ.

ADVERTISEMENT

ವಿದೇಶಿ ಕರೆನ್ಸಿಗಳ ಜೊತೆಗೆ ಹಳೆಯ ನೋಟು, ನಾಣ್ಯಗಳು, ವಿವಿಧ ಬಗೆಯ 1,260 ಬೆಂಕಿ ಪೊಟ್ಟಣಗಳ ಸಂಗ್ರಹವಿದೆ. ದೇಶ, ವಿದೇಶದ ನೂರಾರು ಅಂಚೆ ಚೀಟಿಗಳಿವೆ. ಜೊತೆಗೆ ವಿವಿಧ ಮುಖಬೆಲೆಯ 73 ನಾಣ್ಯಗಳು, ವಿಶೇಷ ಸಂದರ್ಭದಲ್ಲಿ ಬಿಡುಗಡೆಗೊಂಡ 100ಕ್ಕೂ ಹೆಚ್ಚು ನಾಣ್ಯಗಳು, ಅಂಚೆ ಚೀಟಿಗಳಿವೆ. ಇದಕ್ಕಾಗಿ ₹2 ಲಕ್ಷ ರೂಪಾಯಿ ವ್ಯಯಿಸಿದ್ದಾರೆ.

‘ನೋಡಿ; ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸ ಇರುತ್ತವೆ. ಅದೇ ರೀತಿ ಸರ್ಕಾರಿ ಸೇವೆಯ ಜೊತೆಗೆ ಈ ಹವ್ಯಾಸ ಬೆಳಸಿಕೊಂಡಿದ್ದೇನೆ’ ಎಂದು ಕೃಷ್ಣ ಬಾಕಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.