ADVERTISEMENT

ಬಳ್ಳಾರಿ ದೊಂಬಿ | ಬೆಂಗಳೂರಿಗೆ ಪಾದಯಾತ್ರೆ ಮಾಡುವೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:12 IST
Last Updated 6 ಜನವರಿ 2026, 2:12 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಬಳ್ಳಾರಿ: ಗಲಭೆ ಪ್ರಕರಣದ ತನಿಖೆಗೆ ಸಿಬಿಐಗೆ ಕೊಡಬೇಕು. ಇಲ್ಲವೇ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಬೇಕು. ನಾರಾ ಭರತ್‌ ರೆಡ್ಡಿ ಅವರನ್ನು ಬಂಧಿಸಬೇಕು. ಸತೀಶ್‌ ರೆಡ್ಡಿಯನ್ನು ರಕ್ಷಿಸಬಾರದು. ಇಲ್ಲದಿದ್ದರೆ ಪಕ್ಷದ ಅನುಮತಿ ಪಡೆದು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುತ್ತೇನೆ. ಕಾಂಗ್ರೆಸ್‌ ಸರ್ಕಾರಕ್ಕೆ ಪಾಠ ಕಲಿಸುತ್ತೇನೆ’ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. 

ನಗರದಲ್ಲಿ ಮಾತನಡಿದ ಅವರು ‘ಶಾಸಕ ಭರತ್‌ ರೆಡ್ಡಿ ಅವರೇ ಇದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಹೀಗಾಗಿ ಇದು ಸರ್ಕಾರದ್ದೇ ಪ್ರಯತ್ನ ಎಂದು ನಂಬಬೇಕಾಗುತ್ತದೆ. ಗುಂಡು ಭರತ್‌ ರೆಡ್ಡಿ ಅವರ ಅಂಗರಕ್ಷಕರದ್ದೇ ಆಗಿದ್ದು ಅವರನ್ನು ಬಂಧಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT