ADVERTISEMENT

ರಸ್ತೆಗೆ ನುಗ್ಗಿದ ಪ್ರವಾಹ ನೀರು: ತೆಪ್ಪದಲ್ಲಿ ಮೃತದೇಹ ಒಯ್ದು ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:48 IST
Last Updated 20 ಆಗಸ್ಟ್ 2025, 5:48 IST
   

ಬಳ್ಳಾರಿ: ಜಿಲ್ಲೆಯ ಕಂಪ್ಲಿಯ ಕೋಟೆ ವ್ಯಾಪ್ತಿಯ ನದಿ ದಂಡೆ ಪಕ್ಕದ ಸ್ಮಶಾನಕ್ಕೆ ತೆರಳುವ ರಸ್ತೆಗೆ ಪ್ರವಾಹ ನೀರು ನುಗ್ಗಿದೆ. ಅಂತ್ಯಕ್ರಿಯೆಗೆ ಹರಸಾಹಸ ಪಡುವಂತಾಗಿದೆ.

ಪಟ್ಟಣದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದವರು ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿ ಅಂತಿಮ ವಿಧಿವಿಧಾನ ನೆರವೇರಿಸಿದರು.

‘ಪ್ರವಾಹ ಬಂದಾಗಲೆಲ್ಲ ಈ ರೀತಿ ಕಷ್ಟಪಟ್ಟು ಕುಟುಂಬದ  ಕೆಲವರು ತೆರಳಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸ್ಮಶಾನಕ್ಕೆ ಹೋಗುವ ರಸ್ತೆಗೆ ಪ್ರವಾಹ ನೀರು ನುಗ್ಗದಂತೆ ಮತ್ತು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.