ಸಿರುಗುಪ್ಪ: ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಸ್ಥಳದಲ್ಲಿ ವಿಶ್ವಹಿಂದೂ ಪರಿಷತ್, ಹಿಂದೂ ಮಹಾಗಣಪತಿ ಮಂಡಳಿ ವತಿಯಿಂದ ಭಾರ್ಗವರಾಮ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಬಾಲರಾಮ ಗಣಪತಿ, ಕಮ್ಮಾವಾರಿ ಯುವಜನ ಸಂಘದ ಅಭಯ ಹಸ್ತ ಗಣಪತಿ, ನೇತಾಜಿ ವ್ಯಾಯಾಮ ಶಾಲೆಯ ಆವರಣದ ಚತುರ್ಭಜ ಗಣಪತಿ, ಸಾರಿಗೆ ಘಟಕದ ಬಾಲಗಣಪತಿ ಸೇರಿದಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಗಣೇಶ ಮಂಡಳಿಯವರು ವಿವಿಧ ಮಾದರಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.