
ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯಿಂದ ಕೊಪ್ಪಳದಲ್ಲಿ ಜ.5ರಂದು ನಡೆಯುವ ಗವಿಸಿದ್ದೇಶ್ವರ ಮಹಾರಥೋತ್ಸವದ ದಾಸೋಹಕ್ಕಾಗಿ 25,000 ಜೋಳದ ರೊಟ್ಟಿ ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಕಳುಹಿಸುವುದಾಗಿ ಯುವಕ ಮಂಡಳಿಯವರು ಬುಧವಾರ ತಿಳಿಸಿದರು.
ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನ ಆವರಣದಲ್ಲಿ ಸ್ಥಳೀಯರಾದ ಎ. ಪುಷ್ಪಾವತಿ, ಲೀಲಾವತಿ, ಉಮಾದೇವಿ, ಕೊಟ್ರಮ್ಮ, ಜಯಲಕ್ಷ್ಮಿ, ಗಂಗಮ್ಮ, ದೇವಕ್ಕಮ್ಮ, ಈಶ್ವರಮ್ಮ ಇತರರು ನಾಲ್ಕು ದಿನಗಳಿಂದ ರೊಟ್ಟಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಕೆಲವರು ಮನೆಯಲ್ಲಿಯೇ ರೊಟ್ಟಿ ಸಿದ್ಧಮಾಡಿ ಸಂಘಟಕರಿಗೆ ಒಪ್ಪಿಸುತ್ತಿದ್ದಾರೆ.
‘ಜ.3ರಂದು ಗ್ರಾಮದ ಯುವಕರು ಸೇರಿ ಕೊಪ್ಪಳ ಗವಿಮಠಕ್ಕೆ ಪಾದಯಾತ್ರೆ ಕೈಗೊಳ್ಳುತ್ತೇವೆ. ಎರಡು ದಿನ ಮಠದಲ್ಲಿಯೇ ವಾಸ್ತವ್ಯ ಹೂಡಿ ಅಜ್ಜನ ಸೇವೆ ಮಾಡುತ್ತೇವೆ’ ಎಂದು ಮಂಡಳಿಯ ಪದಾಧಿಕಾರಿಗಳಾದ ಜಿ. ಅಮರೇಗೌಡ, ಗುಡ್ಡದ ಜಂಬುನಾಥ, ಅಳ್ಳಳ್ಳಿ ಮಂಜುನಾಥ, ಅಗಸಿ ಬಸವನಗೌಡ, ಎಚ್.ಎಸ್. ಮಲ್ಲಿಕಾರ್ಜುನ, ಎಸ್. ಚಿದಾನಂದಪ್ಪ, ರುದ್ರಗೌಡ, ಜೆ. ಚನ್ನವೀರ, ಕೋರಿ ಚೆನ್ನಬಸವ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.