ADVERTISEMENT

ಗುಡ್ ಫ್ರೈಡೇ: ಯೇಸು ಜೀವನದ ಮೇಲೆ ಬೆಳಕು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 16:19 IST
Last Updated 2 ಏಪ್ರಿಲ್ 2021, 16:19 IST
ಗುಡ್‌ ಫ್ರೈಡೆ ಪ್ರಯುಕ್ತ ಹೊಸಪೇಟೆಯ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಶುಕ್ರವಾರ ಯೇಸು ಶಿಲುಬೆಗೇರಿಸಿದ ರೂಪಕ ಪ್ರದರ್ಶಿಸಲಾಯಿತು
ಗುಡ್‌ ಫ್ರೈಡೆ ಪ್ರಯುಕ್ತ ಹೊಸಪೇಟೆಯ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಶುಕ್ರವಾರ ಯೇಸು ಶಿಲುಬೆಗೇರಿಸಿದ ರೂಪಕ ಪ್ರದರ್ಶಿಸಲಾಯಿತು   

ಹೊಸಪೇಟೆ (ವಿಜಯನಗರ): ಯೇಸು ಕ್ರಿಸ್ತನ ಶಿಲುಬೆಗೆ ಏರಿಸಿದ ದಿನವಾದ ಗುಡ್ ಫ್ರೈಡೇ ಪ್ರಯುಕ್ತ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಧರ್ಮೀಯರು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.

ನಗರದ ಹೃದಯ ಭಾಗದಲ್ಲಿರುವ ಸೆಕ್ರೇಡ್‌ ಹಾರ್ಟ್ ಚರ್ಚ್‌ನಲ್ಲಿ ಕ್ರೈಸ್ತ ಧರ್ಮದ ಯುವಕ-ಯುವತಿಯರು ಯೇಸು ಕ್ರಿಸ್ತನ ಜೀವನ, ಶಿಲುಬೆಗೇರಿದ, ಮರಣ ಹೊಂದಿದ ವಿವಿಧ ಹಂತಗಳ ರೂಪಕ ಪ್ರದರ್ಶಿಸಿದರು. ಫಾದರ್ ದಿಲೀಪ್ ಮಾತನಾಡಿ, ‘ಭೂಲೋಕದಲ್ಲಿ ಯೇಸು ತಾನು ಬದುಕಿದ್ದ 33 ವರ್ಷಗಳ ಕಾಲ ಒಳ್ಳೆಯದನ್ನೇ ಮಾಡಿದ. ಕೆಲವರು ದುರುದ್ದೇಶದಿಂದ ಕ್ರೂರ ಶಿಕ್ಷೆ ನೀಡಿ ಶಿಲುಬೆಗೆ ಏರಿಸಿದ ಕಠಿಣ ಸಂದರ್ಭವನ್ನು ಚರ್ಚಿನ ಯುವಕರ ಸಂಘವು ರೂಪಕವಾಗಿ ಪ್ರದರ್ಶಿಸಿದ್ದಾರೆ. ಈ ದಿನ ಕ್ರೈಸ್ತರ ಪಾಲಿಗೆ ಬಹಳ ಮಹತ್ವದ್ದು’ ಎಂದು ಹೇಳಿದರು.

ಪ್ರಾರ್ಥನೆ ನಂತರ ಶಿಲುಬೆ ಸಂಸ್ಕಾರ ಕಾರ್ಯಕ್ರಮ ಜರುಗಿತು. ನೂರಾರು ಜನ ಅದರಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.