ADVERTISEMENT

‘ರೈತರ ಬೆಳೆಗೆ ಉತ್ತಮ ಬೆಲೆ ಸಿಗಲಿ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 6:30 IST
Last Updated 13 ಸೆಪ್ಟೆಂಬರ್ 2021, 6:30 IST
ಕೊಟ್ಟೂರು ತಾಲ್ಲೂಕಿನ ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶಿವಚಾರ್ಯ ಸ್ವಾಮಿಜಿಯವರ ಪುರಾಣ ಕಾರ್ಯಕ್ರಮ ನೆರವೇರಿತು
ಕೊಟ್ಟೂರು ತಾಲ್ಲೂಕಿನ ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶಿವಚಾರ್ಯ ಸ್ವಾಮಿಜಿಯವರ ಪುರಾಣ ಕಾರ್ಯಕ್ರಮ ನೆರವೇರಿತು   

ಕೊಟ್ಟೂರು: ‘ಲಿಂ. ಶ್ರೀ ಸಿದ್ದಲಿಂಗ ಜಗದ್ಗುರುಗಳವರು ನಾಡಿನೆಲ್ಲೆಡೆ ಸಂಚರಿಸಿ ಧರ್ಮ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿ, ಅನೇಕ ಪವಾಡಗಳನ್ನು ಮಾಡಿ ಪವಾಡ ಪುರುಷ ಮಹಾತಪಸ್ವಿ ಎಂದೆನಿಸಿಕೊಂಡು, ಪಂಚಪೀಠಗಳ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸಿದವರು’ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಸಿದ್ದಲಿಂಗ ಜಗದ್ಗುರುಗಳ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಳ್ಳಾರಿಯಲ್ಲಿರುವ ವೀರಶೈವ ವಿದ್ಯಾವರ್ಧಕ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರೆ ಲಿ. ಸಿದ್ದಲಿಂಗ ಜಗದ್ಗುರುಗಳವರ ಕೃಪಾಶೀರ್ವಾದವೇ ಕಾರಣ ಎಂದ ಅವರು, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂದರು.

ADVERTISEMENT

ಅಫಜಲ್‌ಪುರ ಅರುಣ್ ಕುಮಾರ್ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಹುಲ್ಲುಮನಿ ತಿಮ್ಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಂಡ್ಲಹಳ್ಳಿ ಪರುಸಪ್ಪ. ಉಪಾಧ್ಯಕ್ಷೆ ಮಳ್ಳಕ್ಕ, ಪಿಡಿಒ ಉಮಾಪತಿ, ವೈದ್ಯಾಧಿಕಾರಿ ರವಿತೇಜು, ತಾ.ಪಂ.ಮಾಜಿ ಸದಸ್ಯ ಹೂಡೇಂ ಪಾಪನಾಯಕ, ಪೀಠದ ವ್ಯವಸ್ಥಾಪಕ ವೀರೇಶ್, ಪುರಾಣ ಪ್ರವಚನಕಾರ ಶಶಿಧರ್ ಶಾಸ್ತ್ರಿ, ಸಂಗೀತ ಕಲಾವಿದರಾದ ಜೆ. ಎಚ್. ಎಂ. ವಾಗೀಶಯ್ಯ, ಸಂತೋಷ್ ಕುಮಾರ್ ಪತ್ತಾರ್ ಇದ್ದರು. ಶಿಕ್ಷಕ ಜೋಷಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.