ADVERTISEMENT

ತೆಕ್ಕಲಕೋಟೆ | ಉತ್ತಮ ಮಳೆ: ತುಂಬಿದ ಹಳ್ಳ ಕೊಳ್ಳ

ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:51 IST
Last Updated 20 ಜುಲೈ 2024, 13:51 IST
ತೆಕ್ಕಲಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ತೊಗರಿ ಹೊಲದಲ್ಲಿ ಕಳೆ ಹಸನುಗೊಳಿಸುತ್ತಿರುವ ಮಹಿಳೆಯರು
ತೆಕ್ಕಲಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ತೊಗರಿ ಹೊಲದಲ್ಲಿ ಕಳೆ ಹಸನುಗೊಳಿಸುತ್ತಿರುವ ಮಹಿಳೆಯರು   

ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಬರುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ವೇಗ ಪಡೆದಿವೆ.

ಸಿರಿಗೇರಿ, ಎಂ.ಸುಗೂರು, ದರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಕಂಡು ಬಂತು. ಶುಕ್ರವಾರ ಸಂಜೆ 3ರಿಂದ 4 ರ ವರೆಗೆ ಬಿಟ್ಟು ಬಿಟ್ಟು ರಭಸವಾಗಿ ಮಳೆ ಸುರಿದಿದೆ. ಇದರಿಂದಾಗಿ ರೈತಾಪಿ ವರ್ಗ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ, ಜೋಳ, ಮೆಕ್ಕೆ ಜೋಳ ಮುಂತಾದ ಬೆಳೆಗಳು ನಳನಳಿಸುತ್ತಿದ್ದು, ರೈತರು, ಕೃಷಿ ಕಾರ್ಮಿಕರು ಕಳೆ ತೆಗೆಯುವ ದೃಶ್ಯ ಕಂಡುಬಂತು.

ಮಳೆಯ ವಿವರ:

ADVERTISEMENT

ಸಿರುಗುಪ್ಪ 0.28 ಸೆಂ.ಮೀ, ತೆಕ್ಕಲಕೋಟೆ 0.22ಸೆಂ.ಮೀ, ಎಂ. ಸೂಗುರು 0.18 ಸೆಂ.ಮೀ, ಹಚ್ಚೋಳ್ಳಿ 0.42 ಸೆಂ.ಮೀ, ಕೆ.ಬೆಳಗಲ್ಲು 0.I4 ಸೆಂ.ಮೀ ಸೇರಿದಂತೆ ಒಟ್ಟಾರೆ ತಾಲ್ಲೂಕಿನಾದ್ಯಂತ ಸರಾಸರಿ 0.185 ಸೆಂ.ಮೀಟರ್ ಮಳೆ ದಾಖಲಾಗಿದೆ.

ತೆಕ್ಕಲಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ತೊಗರಿ ಹೊಲದಲ್ಲಿ ಕಳೆ ಹಸನುಗೊಳಿಸುತ್ತಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.