
ಪ್ರಜಾವಾಣಿ ವಾರ್ತೆ
ಬಳ್ಳಾರಿ: ಬಳ್ಳಾರಿಯ ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಬೆಳ್ಳಿ ಪದಕ ಲಭಿಸಿದೆ.
ಆಸ್ಟ್ರೇಲಿಯಾದಲ್ಲಿ ಫೆ.16 ರಿಂದ 21 ರವರೆಗೆ ನಡೆದ ವರ್ಲ್ಡ್ ಪ್ಯಾರಾ ಈಜು ಸ್ಪರ್ಧೆ ಚಾಂಪಿಯನ್‌ಶಿಪ್‌ನಲ್ಲಿ ಬಳ್ಳಾರಿಯ ಗೋಪಿಚಂದ್ ಭಾರತ ಭಾಗವಹಿಸಿದ್ದರು. ಅಲ್ಲಿ ಅವರು, 4x100 ಮೀಟರ್ ಮಿಡ್ ರಿಲೇ ಯಲ್ಲಿ ಎರಡನೇ ಸ್ಥಾನ ಅಲಂಕರಿಸುವ ಮೂಲಕ ಅಂತರಾಷ್ಟ್ರೀಯ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇದು ಅಂತರಾಷ್ಟ್ರೀಯ ಪ್ಯಾರಾ ಸ್ವಿಮ್ಮರ್‌ನಲ್ಲಿ ಬಳ್ಳಾರಿಗೆ ಜಿಲ್ಲೆಗೆ ಸಿಕ್ಕ ಮೊದಲನೇಯ ಪದಕ.
ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ರಜನಿ ಲಕ್ಕಾ ಮತ್ತು ಶರತ್ ಗಾಯಕ್‌ವಾಡ್ ಅವರು ತರಬೇತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.